ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಚುನಾವಣಾ ಖರ್ಚಿಗೆಂದು ಚಿಕ್ಕಮಗಳೂರು ನಗರದ ಚರುಮುರಿ ವ್ಯಾಪಾರಿಯೊಬ್ಬರು 25 ಸಾವಿರ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.
ಬಿ.ಜೆ.ಪಿ. ಅಭಿಮಾನಿಯಾಗಿರುವ ಲೋಕೇಶ್ ಬಾಬು ಎಂಬುವವರು 25 ಸಾವಿರ ಹಣ ನೀಡಿದ ಚುರುಮುರಿ ವ್ಯಾಪಾರಿ.
ಇಂದು ನಗರದಲ್ಲಿ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಫಲತಾಂಬೂಲದೊಂದಿದೆ ಇಪ್ಪತ್ತೈದು ಸಾವಿರ ರೂ ಹಣವಿಟ್ಟುಕೊಟ್ಟ ಲೋಕೇಶ್
ಚಿಕ್ಕಮಗಳೂರು ತಾಲೂಕಿನ ತೇಗೂರು ಸರ್ಕಲ್ ನಲ್ಲಿರುವ ಚುರುಮುರಿ ಅಂಗಡಿಯಲ್ಲಿ ಇಂದು ಪ್ರಚಾರಕ್ಕೆಂದು ಹೋದಾಗ ಹಣ ನೀಡಿದ ಲೊಕೇಶ್.
ಇಂದು ಚಿಕ್ಕಮಗಳೂರು ನಗರದ ವಿವಿದೆಡೆ ಪ್ರಚಾರ ಮಾಡುತ್ತಿರುವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಚರುಮುರಿ ವ್ಯಾಪಾರಿ ಹಣವನ್ನು ನೀಡಿ ಶುಭ ಹಾರೈಸಿದ್ದು ಗಮನ ಸೆಳೆದಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಟಿ.ರವಿಯವರು ಮತ್ತು ಬಿ.ಜೆ.ಪಿ. ಜಿಲ್ಲಾಧ್ಯಕ್ಷ ದೇವರಾಜು ಶೆಟ್ಟಿ ಸೇರಿದಂತೆ ಅನೇಕ ಬಿ.ಜೆ.ಪಿ. ಮುಖಂಡರು ಉಪಸ್ಥಿತರಿದ್ದರು.
https://youtu.be/PLAq1_wsZ0s?si=vV1pEbJnJ5XF8Ufk



