ಸಾಂದರ್ಭಿಕ ಚಿತ್ರ
ಕೊಡಗಿನಲ್ಲಿ ಆನೆದಾಳಿ ಜೊತೆಗೆ ಈಗ ಹುಲಿ ಹಾವಳಿ ಶುರುವಾಗಿದೆ. ಕಾಡಾನೆ ದಾಳಿಯಿಂದ ಮೊನ್ನೆ ತಾನೆ ಒಬ್ಬರು ವ್ಯಕ್ತಿ ಸಾವನ್ನಪ್ಪಿದ್ದ ಪೊನ್ನಂಪೇಟೆ ತಾಲ್ಲೂಕಿನಲ್ಲಿ ನಿನ್ನೆ ಹುಲಿದಾಳಿಗೆ ವ್ಯಕ್ತಿಯೊಬ್ಬರು ಜೀವ ಕಳೆದುಕೊಂಡಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮದ ರಾಜಪುರ ರಸ್ತೆ ಸಮೀಪ ಗುರುವಾರ ಸಂಜೆ ಹುಲಿಯೊಂದು ವ್ಯಕ್ತಿಯ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ.
ಅಸ್ಸಾಂ ಮೂಲದ ಮೊಹಿಸೂರು ರೆಹಮಾನ್ (51) ಹುಲಿ ದಾಳಿಗೆ ಬಲಿಯಾದ ವ್ಯಕ್ತಿ. ಹಸುವಿನ ಮೇಲೆ ದಾಳಿ ಮಾಡಲು ಬಂದಂತಹ ಹುಲಿ, ಅಲ್ಲೇ ಇದ್ದ ಅಸ್ಸಾಂ ಮೂಲದ ಕಾರ್ಮಿಕ ಮೊಹಿಸೂರು ರೆಹಮಾನ್ ಮೇಲೆ ಎಗರಿ ಬಲಿ ತೆಗೆದುಕೊಂಡಿದೆ.
ಘಟನೆಯ ಕುರಿತು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಈ ಹುಲಿ ದಾಳಿಯಿಂದ ಈ ಭಾಗದ ಜನತೆ ಭಯ ಭೀತರಾಗಿದ್ದು, ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.



