ramesh yadav

 

 

ಕನ್ನಡದ ಹೆಸರಾಂತ ಟಿ.ವಿ. ಚಾನಲ್ ಜೀ ಕನ್ನಡದ ಜನಪ್ರಿಯ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಅಪ್ಪಟ ಗ್ರಾಮೀಣ ಪ್ರತಿಭೆ ರಮೇಶ್ ಯಾದವ್ ಆಯ್ಕೆಯಾಗಿದ್ದಾರೆ.

ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿಯ ಕೂವೆ ಗ್ರಾಮದ ರಮೇಶ್ ಯಾದವ್ ತನ್ನ ಸಹಜವಾದ ಹಾಸ್ಯಪ್ರವೃತ್ತಿಯಿಂದ ಈಗಾಗಲೇ ಮಲೆನಾಡಿನಾದ್ಯಂತ ಮನೆಮಾತಾಗಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಹಾಸ್ಯದ ತುಣುಕುಗಳು, ವಿಭಿನ್ನವಾದ ನಟನೆ ಮತ್ತು ಹಾಸ್ಯಮಯ ಮಾತುಗಳು ಬಹಳಷ್ಟು ಹರಿದಾಡುತ್ತಿದ್ದು ಜನರನ್ನು ನಕ್ಕು ನಗಿಸುತ್ತಿದ್ದಾರೆ.

ವೃತ್ತಿಯಲ್ಲಿ ಕೂಲಿ ಕಾರ್ಮಿಕರಾದ ರಮೇಶ್ ಯಾದವ್ ಸಮಾಜದ ವಿವಿಧ ವಿಷಯಗಳ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದು, ವಿಶೇಷವಾಗಿ ಕ್ರೀಡೆ, ರಾಜಕೀಯ ವಿಷಯಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ.

ಮಲೆನಾಡಿನ ಗ್ರಾಮೀಣ ಸೊಗಡಿನ ಸಹಜವಾದ ಮಾತುಗಾರಿಕೆಯಿಂದ ಅವರು ವ್ಯಕ್ತಪಡಿಸುವ ಹಾಸ್ಯ ನಟನೆ ಈಗ ಜೀ ಕನ್ನಡದ ಗಮನ ಸೆಳೆದಿದ್ದು, ಅವರು ರಾಜ್ಯಮಟ್ಟದಲ್ಲಿ ತನ್ನ ಪ್ರತಿಭೆಯ ಛಾಪು ಮೂಡಿಸಲು ಅವಕಾಶ ಪಡೆದಿದ್ದಾರೆ.

ರಮೇಶ್ ಯಾದವ್ ಅವರಿಗೆ ಸ್ಥಳೀಯ ಕೂವೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಹಾವಳಿ ಅವರು ಪ್ರೋತ್ಸಾಹಕರಾಗಿ ನಿಂತಿದ್ದು, ರಮೇಶ್ ಯಾದವ್ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡಿ ಸಾಮಾಜಿಕ ಮಾಧ್ಯಮಗಳ ಮೂಲಕ ಅವರ ಪ್ರತಿಭೆಯನ್ನು ಪ್ರಚುರಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ರಮೇಶ್ ಯಾದವ್ ಅವರು ಜೀ ಕನ್ನಡ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದಕ್ಕೆ ಅವರ ಸ್ನೇಹಿತರು ಮತ್ತು ಅಭಿಮಾನಿ ಬಳಗ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ