ವಿಶ್ವ ಪರಿಸರ ದಿನಾಚರಣೆ-2024 ಕಾರ್ಯಕ್ರಮವನ್ನು ದಿನಾಂಕ 05-06-2024 ರಂದು ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ ಎ.ಟಿ., ಮಾನವ ಸೇರಿದಂತೆ ಪ್ರಾಣಿಗಳು, ಪಕ್ಷಿಗಳು, ಜೀವ ಸಂಕುಲಗಳು ಗಾಳಿ, ನೀರು, ಮಣ್ಣಿನ ಮೇಲೆ ಅವಲಂಬಿತವಾಗಿವೆ. ಪ್ರಕೃತಿ ಮಾನವನಿಗೆ ದೊರೆತ ಅತ್ಯಮೂಲ್ಯ ಸಂಪತ್ತು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು.-ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆU ಕೈಜೋಡಿಸಬೇಕು ಎಂದರು.
ಕೇಂದ್ರದ ಬೇಸಾಯಶಾಸ್ತ್ರದ ವಿಜ್ಞಾನಿ ಡಾ. ಉಲ್ಲಾಸ ಎಂ.ವೈ., ರವರು ಮಾತನಾಡಿ ಪರಿಸರ ಮಾಲಿನ್ಯ, ಜಲ, ಶಬ್ದ ಮತ್ತು ಮಣ್ಣು ಮಾಲಿನ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿ ವರ್ಷ ವಿಶ್ವಸಂಸ್ಥೆ ಒಂದೊಂದು ಫೋಷವಾಕ್ಯದೊಂದಿಗೆ ವಿಶ್ವ ಪರಿಸರದಿನಾಚರಣೆ ಮಾಡಲಾಗುತ್ತದೆ. ಈ ವರ್ಷ ಪೋಷವಾಕ್ಯವೇ ನೆಂದರೆ “ಭೂ ಪುನಶ್ಚೇತನ ಮತ್ತು ಬರ ಸ್ಥಿತಿಸ್ಥಾಪಕತ್ವ” ಅನ್ನು ಫೋಷವಾಕ್ಯದೊಂದಿಗೆ ಆಚರಿಸಲಾಯಿತು. ನೈಸರ್ಗಿಕ ಸಂಪನ್ಮೂಲಗಳ ಅತೀಯಾದ ಬಳಕೆಯಿಂದಾಗಿ ಮುಂದಿನ ದಿನಗಳಲ್ಲಿ ಮಾಲಿನ್ಯದ ಅಪಾಯಕ್ಕೆ ಸಿಲುಕಲಿದ್ದೇವೆ. ಆದ್ದರಿಂದ ಹೆಚ್ಚು ಹೆಚ್ಚು ಮರ ಗಿಡಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಿಸಿದರೆ ಮಾತ್ರ ಮನುಕುಲಕ್ಕೆ ಉಳಿಗಾಲವಿದೆ, ಇಲ್ಲವಾದರೆ ಮುಂದಿನ ಪೀಳಿಗೆಗೆ ಸಂಕಷ್ಟ ಕಾದಿದೆ ಎಂದು ತಿಳಿಸಿದರು.
ಡಾ. ಎಂ. ಶಿವಪ್ರಸಾದ್, ಸಹ ವಿಸ್ತರಣಾ ನಿರ್ದೇಶಕರು, ವ.ಕೃ.ತೋ.ಸಂ. ಕೇಂದ್ರ, ಮೂಡಿಗೆರೆ ಇವರು ಮಾತನಾಡಿ ಪ್ಲಾಸ್ಟಿಕ್ ನಂತಹ ವಸ್ತುಗಳ ಬಳಕೆಯನ್ನು ಅಳವಡಿಸಿಕೊಳ್ಳಬಾರದು. ಹಳೆಯ ಮತ್ತುತ್ಯಾಜ್ಯ ಉತ್ಪನ್ನಗಳ ಮರುಬಳಕೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಪೂರ್ಣೇಶ್ ಹೆಚ್.ಕೆ., ಪ್ರಗತಿಪರ ರೈತರು ಹಾಗೂ ಮೂಡಿಗೆರೆ ರೈತ ಉತ್ಪಾದಕರ ಸಂಘದ ಅಧ್ಯಕ್ಷರು ಇವರು ಮಾತನಾಡಿದರು.
ಪರಿಸರ ರಕ್ಷಣೆಗಾಗಿ ಅರಿವು ಮೂಡಿಸಲು ವಿವಿಧ ಜಾತಿಯ 26ಗಿಡಗಳನ್ನು ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆಯ ಆವರಣದಲ್ಲಿ ನೆಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 25ಜನ ರೈತರಿಗೆ ತಲಾ 12ರಂತೆ ಒಟ್ಟು274ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಸುಚಿತ್ರಾ ಕುಮಾರಿ ಎಂ.ಹೆಚ್., ವಿಜ್ಞಾನಿ (ಸಸ್ಯ ಸಂರಕ್ಷಣೆ), ಡಾ. ಪ್ರಶಾಂತ ಜಿ.ಎಂ., ವಿಜ್ಞಾನಿ (ಮಣ್ಣು ವಿಜ್ಞಾನ), ಡಾ. ಸುರೇಶಕುಮಾರಬಿ., ವಿಜ್ಞಾನಿ (ತೋಟಗಾರಿಕೆ) ಹಾಗೂಕೇಂದ್ರದ ಎಲ್ಲಾ ಸಿಬ್ಬಂಧಿಗಳು ಮತ್ತು ಗೋಣಿಬೀಡು ಹಾಗೂ ಚಿಮ್ಮಟಗೆರೆ ಗ್ರಾಮದ ರೈತರು ಉಪಸ್ಥಿತರಿದ್ದರು.


