15ktg02

 

 

ಬೈಕ್ ಸವಾರರು ಕಳೆದುಕೊಂಡಿದ್ದ ಮೊಬೈಲ್‍ವೊಂದನ್ನು ಹಿಂದಿರುಗಿಸುವ ಮೂಲಕ ಯುವಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಶಿವಮೊಗ್ಗದಿಂದ ಬಾಳೆಹೊನ್ನೂರು, ಕೊಟ್ಟಿಗೆಹಾರ ಮಾರ್ಗವಾಗಿ ಧರ್ಮಸ್ಥಳಕ್ಕೆ ಬೈಕ್‍ನಲ್ಲಿ ಹೋಗುತ್ತಿದ್ದ ಪ್ರವಾಸಿಗರೊಬ್ಬರು ಬಾಳೂರು ಸಮೀಪ ರಸ್ತೆಯಲಿ ಮೊಬೈಲ್ ಬೀಳಿಸಿ ದರ್ಮಸ್ಥಳಕ್ಕೆ ಹೋಗಿದ್ದರು. ಕೊಟ್ಟಿಗೆಹಾರದಿಂದ ನಿಡುವಾಳೆಗೆ ಸಾಗುತ್ತಿದ್ದ ಯುವಕ ಪ್ರದೀಪ್ ರಾಜ್ ಬಿನ್ನಡಿ ಅವರು ಕೆಲಸಕ್ಕೆ ತೆರಳುವ ವೇಳೆ ಬಾಳೂರು ಸಮೀಪ ರಸ್ತೆಯಲ್ಲಿ 29ಸಾವಿರ ಬೆಲೆ ಬಾಳುವ ಸ್ಯಾಂಸಂಗ್ ಮೊಬೈಲ್ ಸಿಕ್ಕಿದೆ.

ಮೊಬೈಲ್‍ಗೆ ಕರೆ ಬಂದಾಗ ಅದನ್ನು ಸ್ವೀಕರಿಸಿ ಅವರಿಗೆ ಕೊಟ್ಟಿಗೆಹಾರಕ್ಕೆ ಬರಲು ಹೇಳಿ ಮೊಬೈಲ್ ಕಳೆದುಕೊಂಡ ಶಿವಮೊಗ್ಗ ಸಬ್ ಇನ್‍ಸ್ಪೆಕ್ಟರ್ ಬಸವರಾಜ್ ಅವರ ಪುತ್ರ ಕಿರಣ್‍ಕುಮಾರ್ ಅವರಿಗೆ ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಯುವಕನ ಪ್ರಾಮಾಣಿಕತೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ