samaropa

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆ ವತಿಯಿಂದ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ಕಳಸದ ಶ್ರೀ ಮಹಾವೀರ ಸಭಾ ಭವನದಲ್ಲಿ ನಡೆಯಿತು,

ಕಾರ್ಯಕ್ರಮದಲ್ಲಿ  ಹೊರನಾಡು ಕ್ಷೇತ್ರದ ಧರ್ಮಕರ್ತರಾದ ಶ್ರೀ ಜಿ. ಭೀಮೇಶ್ವರ ಜೋಷಿಯವರು ಮಾತನಾಡಿ ; ಮದ್ಯ ವ್ಯಸನಿಗಳು ಮದ್ಯವನ್ನ ಬಿಡುವುದು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಸಜ್ಜನರ ಸಾತ್ವಿಕರ ಸಹವಾಸ ಮಾಡಬೇಕಾಗಿದೆ ಮದ್ಯಪಾನ ಮಾಡುವವರ ಸಹವಾಸ ಮಾಡಿದರೆ ಮತ್ತೆ ಮದ್ಯಕ್ಕೆ ದಾಸರಾಗಬೇಕಾಗುತ್ತದೆ. ಮಾನವ ಜೀವನ ಅತ್ಯಂತ ಶ್ರೇಷ್ಠವಾದುದು. ಇಂತಹ ಜೀವನವನ್ನು ಮಾದಕ ವಸ್ತುಗಳ ವ್ಯಸನದಿಂದ ಹಾಳು ಮಾಡಿಕೊಳ್ಳಬಾರದು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ವ್ಯಸನಗಳಿಂದ ಹೊರಬರಬೇಕು ಎಂದು ಕಿವಿಮಾತು ಹೇಳಿದರು.

ಶ್ರೀಮತಿ ರಾಜೇಶ್ವರಿ ಜೋಷಿ ಅವರು ಮಾತನಾಡಿ ನಾವು ನಮ್ಮನ್ನೇ ತಿದ್ದುಕೊಳ್ಳುವುದೇ ಕಷ್ಟ ಹೀಗೆ ಇರುವಾಗ ಇಷ್ಟೊಂದು ಮದ್ಯವ್ಯಸನಿಗಳನ್ನ ಇಲ್ಲಿ ಸೇರಿಸಿ ಅವರನ್ನ ತಿದ್ದುತ್ತಿರುವುದು ತುಂಬಾ ಕಠಿಣ ಹಾಗೂ ಶ್ರೇಷ್ಠವಾದ ಕೆಲಸ. ಇದನ್ನು ಮಾಡುತ್ತಿರುವ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ  ಅಭಿನಂದನೆಗಳನ್ನು ಸಲ್ಲಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟಿನ ಟ್ರಸ್ಟಿ ಆದ ಪ್ರಶಾಂತ್ ಚಿಪ್ರಗುತ್ತಿರವರು ಮಾತನಾಡಿ ಸರಕಾರ  ಆಹಾರ ತಯಾರಿಕೆಯಲ್ಲಿ ಹೋಟೆಲ್ ನಲ್ಲಿ ಬಳಸುವ ಟೆಸ್ಟ್ ಮೇಕರ್,  ಕಲರ್ ಗಳು  ಹಾಗೂ ಇನ್ನಿತರ ಆರೋಗ್ಯಕ್ಕೆ ಹಾನಿ ಆಗುವಂಥ ವಸ್ತುಗಳನ್ನು ನಿಷೇಧ ಮಾಡುತ್ತಿದೆ. ಆದರೆ ಮದ್ಯಪಾನ ಮಾದಕ ವಸ್ತುಗಳು ಮನುಷ್ಯನ ದೇಹಕ್ಕೆ ಹಾನಿಕಾರಕ ಎಂದು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕಿಯಾದ  ಶ್ರೀಮತಿ ಗೀತಾ, ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ, ಮದ್ಯವರ್ಜನ ಶಿಬಿರದ ಅಧ್ಯಕ್ಷರಾದ ಧರಣೇಂದ್ರ, ಜಿಲ್ಲಾ  ಜನಜಾಗೃತಿ ಸಮಿತಿ ಸದಸ್ಯರಾದ ಸುಜಯ, ಬ್ರಹ್ಮದೇವ್ , ವೆಂಕಟಸುಬ್ಬಯ್ಯ ಹಾಗೂ ಇನ್ನಿತರರು ಇದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ