hucchata

 

 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ರಾಣಿಝರಿಗೆ ಸಾಗುವ ರಸ್ತೆಯಲ್ಲಿ ಭಾನುವಾರ ಬೈಕ್ ರೈಡರ್ ಗಳ ಹುಚ್ಚಾಟ ವಿಪರೀತವಾಗಿ ಇತರೆ ಪ್ರವಾಸಿಗರು ಕಿರಿಕಿರಿ ಅನುಭವಿಸಬೇಕಾಯಿತು.

ದಕ್ಷಿಣ ಕನ್ನಡ ಮೂಲದ ಐದಾರು ಜನ ಯುವಕರು ಮೊದಲೇ‌ ಕೆಸರುಮಯವಾಗಿದ್ದ ರಸ್ತೆಯಲ್ಲಿ ರೀಲ್ಸ್ ಹುಚ್ಚಿಗೆ  ಕುಡಿದ ಮತ್ತಿನಲ್ಲಿ ಯುವಕರು 50 ಕ್ಕೂ ಹೆಚ್ಚು ಬಾರಿ ಬೈಕ್ ವೀಲಿಂಗ್ ಮಾಡಿದ ಪರಿಣಾಮ ರಸ್ತೆ ಹದೆಗೆಟ್ಟು ಹೋಗಿದೆ.

ಅರ್ಧಗಂಟೆಗೂ ಹೆಚ್ಚು ಕಾಲ ಯುವಕರು ಹುಚ್ಚಾಟ ನಡೆಸಿದರೂ  ಹೇಳೋರಿಲ್ಲ, ಕೇಳೋರಿಲ್ಲ ಎಂಬಾಂತಾಗಿದ್ದು, ಯುವಕರ ಹುಚ್ಚಾಟ ಫೋಟೋ /ವಿಡಿಯೋಗಳಲ್ಲಿ ಸೆರೆಯಾಗಿದೆ.

ಕೆಸರುಮಯ ರಸ್ತೆಯಲ್ಲಿ ಯುವಕರು ಬೈಕ್ ರೈಡ್  ಮಾಡಿ ಬಿದ್ದು ಏಳುತ್ತಿದ್ದ ದೃಶ್ಯವನ್ನು ಮತ್ತೆ ಕೆಲವರು  ಸೆರೆ ಹಿಡಿಯುತ್ತಿದ್ದರು.

ಬೈಕ್ ರೈಡಿಂಗ್ ವೇಳೆ ಯುವಕನ ನಿಯಂತ್ರಣ ತಪ್ಪಿ ಬೈಕೊಂದು ಬೇಲಿಯೊಳಗೆ ನುಗ್ಗಿದ ಘಟನೆಯೂ ಜರುಗಿತು.

ಇತ್ತೀಚೆಗೆ ಬೈಕ್ ರೈಡರ್ ಗಳು ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಈ ರೀತಿ ಬೈಕ್ ಗಳಲ್ಲಿ ಹುಚ್ಚಾಟ ನಡೆಸುವುದು ಹೆಚ್ಚಾಗುತ್ತಿದೆ. ಪ್ರವಾಸಿಗರಿಂದ ಮಲೆನಾಡಿಗರು ಕಿರಿಕಿರಿ ಅನುಭವಿಸುವಂತಾಗಿದೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ