ಮಳೆಯಿಂದ ಮನೆ ಕುಸಿದ ಸಂತ್ರಸ್ತರಿಗೆ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಚಿಕ್ಕಮಗಳೂರು ಘಟಕದ ವತಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು.
ಬಣಕಲ್ ವಿಲೇಜ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಡೆಂಗ್ಯೂ ಹರಡದಂತೆ ಸೊಳ್ಳೆ ಪರದೆಗಳು, ಹೈಜಿನ್ ಕಿಟ್ ಗಳು ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು.
ರೆಡ್ ಕ್ರಾಸ್ ಸಂಸ್ಥೆಯ ಬಿ.ಸಿ.ಪ್ರವೀಣ್ ಮಾತನಾಡಿ’ ಬಣಕಲ್ ನ ಶಾಂತಿನಗರದ ತಾಹೀರಾ,ಕುವೆಂಪುನಗರದ ಸುನೀತಾ ಅವರ ಕುಸಿದ ಮನೆಗೆ ಭೇಟಿ ನೀಡಿ ದಿನವಹಿ ಅಡುಗೆ ಸಾಮಾನುಗಳು ಹಾಗೂ ಇತರ ಸಾಮಗ್ರಿಗಳನ್ನು ವಿತರಿಸಿದ್ದೇವೆ’ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಗ್ರಾ.ಪಂ.ಅಧ್ಯಕ್ಷೆ ಅತಿಕಾಭಾನು, ರೆಡ್ ಕ್ರಾಸ್ ಸಂಸ್ಥೆಯ ಪ್ರದೀಪ್ ಗೌಡ ಪದಾಧಿಕಾರಿಗಳಾದ ಹಾರೂನ್ ಬಣಕಲ್, ಮೊಹಮ್ಮದ್ ಆರೀಫ್, ಶಿಕ್ಷಕ ಪೂರ್ಣೇಶ್ ಮತ್ತಾವರ ಮತ್ತಿತರರು ಇದ್ದರು.




