thalavara swathan

 

 

ಅಂದು ಗ್ರಾಮ ಗ್ರಾಮಗಳಲ್ಲಿ ನಡೆದ ಚಿಕ್ಕಪುಟ್ಟ ಸಭೆ ಹೋರಾಟಗಳು ರಾಷ್ಟ್ರಕ್ಕೆ ಸ್ವತಂತ್ರ ಸಿಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದವು, ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ದೊರೆತಿರುವ ಸ್ವಾತಂತ್ಯವನ್ನು ನಾವು ಗೌರವದಿಂದ ಸ್ಮರಿಸಬೇಕು. ರಾಷ್ಟ್ರೀಯ ಹಬ್ಬಗಳಲ್ಲಿ ಪ್ರತಿಯೊಬ್ಬರು ಸಂಭ್ರಮದಿಂದ ಭಾಗವಹಿಸಬೇಕು ಎಂದು ನಿವೃತ್ತ ಶಿಕ್ಷಕ ಕಳಸೆಗೌಡ ತಿಳಿಸಿದರು.

ಅವರು ಮೂಡಿಗೆರೆ ತಾಲ್ಲೂಕಿನ ತಳವಾರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಮಕ್ಕಳು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ಈ ಹಿಂದೆ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಇಡೀ ದೇಶದಲ್ಲಿ ಚಿಕ್ಕಪುಟ್ಟ ಗ್ರಾಮಗಳಲ್ಲೂ ಸಭೆ ಹರತಾಳ ಚಳುವಳಿಗಳನ್ನು ನಡೆಸುವ ಮೂಲಕ ಸ್ವಾತಂತ್ರ್ಯಗೊಳಿಸಲು ಮುನ್ನುಡಿ ಬರೆಯಲಾಯಿತು. ಪ್ರಮುಖವಾಗಿ ಚಂದ್ರಶೇಖರ್ ಆಜಾದ್, ವೀರ ಸಾವರ್ಕರ್. ಭಗತ್ ಸಿಂಗ್. ಮಹಾತ್ಮ ಗಾಂಧಿ. ಸುಭಾಷ್ ಚಂದ್ರ ಬೋಷ್, ಬಾಲ ಗಂಗಾಧರ ತಿಲಕ್. ಸೇರಿದಂತೆ ನಾನಾ ಮುಖಂಡರ ಕರೆಯ ಮೇರೆಗೆ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಪ್ರಾಣತ್ಯಾಗ ಮಾಡಿದ ಫಲವೇ ಇಂದು ಆಧುನಿಕ ಭಾರತವಾಗಿದೆ.

ಚಿಕ್ಕಪುಟ್ಟ ಕೆಲಸ ಮತ್ತು ಘಟನೆಗಳಿಂದಲೆ ಇಂದು ದೇಶ ಭಾಷೆ ಸಂಸ್ಕೃತಿ ನೆಲ ಜಲ ರಕ್ಷಣೆಗೆ ಸಾಧ್ಯವಾಗಿದ್ದು. ಯಾವುದನ್ನು ನಿರ್ಲಕ್ಷಿತ ಬಾರದು. ನಮ್ಮ ಸ್ವತಂತ್ರ ಶಾಶ್ವತವಾಗಿ ಉಳಿಯಲು ನಾವುಗಳು ಮಕ್ಕಳ ಮೂಲಕ ಹಿರಿಯರ ಶ್ರಮವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ. ಪ್ರತಿ ಗ್ರಾಮಗಳಲ್ಲೂ ರಾಷ್ಟ್ರೀಯ ಹಬ್ಬವನ್ನು ಆಚರಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ ಅಣ್ಣೇಗೌಡ, ಮಂಜುನಾಥಗೌಡ. ನಯನ ತಳವಾರ. ಎಸ್ ಡಿ ಎಂ ಸಿ ಅಧ್ಯಕ್ಷ ಅಣ್ಣಪ್ಪ ಹಾಗೂ ಶಾಲಾ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ