November 6, 2026
;
IMG-20240906-WA0713

 

 

ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ನಿವಾಸಿ ಆಯಿಷಾ ನಮ್ರ ಬಿಎಎಂಎಸ್ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಕಾಫಿನಾಡಿಗೆ ಹೆಸರು ತಂದಿದ್ದಾರೆ.

ಆಯಿಷಾ ನಮ್ರ ಕೊಟ್ಟಿಗೆಹಾರದ ಅಸ್ಘರ್ ಹುಸೇನ್ (ಮುನೀರ್) ಹಾಗೂ ರುಕ್ಸಾನ ದಂಪತಿಯ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಬಣಕಲ್ ರಿವರ್ ವ್ಯೂವ್ ಶಾಲೆಯಲ್ಲಿ ಮುಗಿಸಿ ಪ್ರೌಢಶಾಲಾ ಶಿಕ್ಷಣವನ್ನು ಬಣಕಲ್ ಪ್ರೌಢಶಾಲೆಯಲ್ಲಿ ಕಲಿತು, ಪಿಯುಸಿ ಶಿಕ್ಷಣವನ್ನು ಮೂಡಿಗೆರೆಯ ಹರೀಶ್ ಪಿಯು ಕಾಲೇಜಿನಲ್ಲಿ ಮುಗಿಸಿದರು.

ವೈದ್ಯಕೀಯ ಶಿಕ್ಷಣ ಪಡೆಯಲು ಬೆಳ್ತಂಗಡಿಯ ಪ್ರಸನ್ನ ಕಾಲೇಜ್ ಆಫ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆದು  ನಾಲ್ಕೂವರೆ ವರ್ಷ ಬಿಎಎಂಎಸ್ ವೈದ್ಯಕೀಯ ಕೋರ್ಸ್ ಅನ್ನು ಉನ್ನತ ಶ್ರೇಣಿಯಲ್ಲಿ ಮುಗಿಸಿದ್ದಾರೆ. ಕಾಫಿನಾಡಿನ ಈ ವೈದ್ಯ ವಿದ್ಯಾರ್ಥಿನಿಯ ಸಾಧನೆಗೆ ಪೋಷಕರು, ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.

 

 

Leave a Reply

Your email address will not be published. Required fields are marked *