November 5, 2026
;
goni rotary

 

 

ಬೇಲೂರುನಲ್ಲಿ ಇತ್ತೀಚೆಗೆ ನಡೆದ ರೋಟರಿ ಸಂಸ್ಥೆಗಳ ವಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೋಣಿಬೀಡು ರೋಟರಿ ಸಂಸ್ಥೆಯು ಹಲವು ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ.

ಸ್ಕ್ರಿಪ್ಟ್(ಡ್ರಾಮಾ) ದಲ್ಲಿ ಪ್ರಥಮ ಸ್ಥಾನ, ಗಾಯನ ಸ್ಪರ್ಧೆಯಲ್ಲಿ ಪ್ರಥಮ, ಸಮೂಹ ನೃತ್ಯದಲ್ಲಿ ದ್ವಿತೀಯ ಹಾಗೂ ಏಕಪಾತ್ರ ಅಭಿನಯದಲ್ಲಿ ದ್ವಿತೀಯ ಸ್ಥಾನ ಪಡೆದಿದೆ,

ಸ್ಕ್ರಿಪ್ಟ್(ಡ್ರಾಮಾ) ತಂಡದಲ್ಲಿ ಸಂಸ್ಥೆಯ ಸದಸ್ಯರಾದ ಸವಿನ್,  ಪ್ರಕಾಶ್ , ನಯನ್, ವಿನಯ್, ನಿಶಾಲ್, ನಂಜೇಗೌಡ, ಪ್ರವೀಣ್  ಪಾಲ್ಗೊಂಡಿದ್ದರು.

ಸಮೂಹ ನೃತ್ಯದಲ್ಲಿ  ಭಾಗವಹಿಸಿದವರು ಯಮುನಾ ಸವಿನ್ , ಮಮತ ಪ್ರಕಾಶ್, ಸುಪ್ರೀತಾ ನಯನ್ , ರಶ್ಮಿ ರತನ್ , ಅಭಿಲಾಶ್ ಸುಬ್ರಮಣ್ಯ, ಚೇತನಾ ಸಂದೀಪ್,  ಶಾಸ್ವತಿ ನಿಶಾಲ್ , ದೀಪ್ತಿ ನಂಜೇಗೌಡ, ಬಬಿತಾ ಪ್ರಸನ್ನ,  ವಾಗ್ಮಿ ಸುಬ್ರಮಣ್ಯ ಪಾಲ್ಗೊಂಡಿದ್ದರು.

ಏಕಪಾತ್ರಾಭಿನಯದಲ್ಲಿ ನಿಶಾಲ್ ಹಾಗೂ ಗಾಯನ ಸ್ಪರ್ಧೆಯಲ್ಲಿ ಜೆ.ಎಸ್. ರಘು ಬಹುಮಾನ ಗಳಿಸಿಕೊಂಡಿದ್ದಾರೆ.

ಬಹುಮಾನ ಪಡೆದ ಸ್ಪರ್ಧಾಳುಗಳನ್ನು ಇತ್ತೀಚೆಗೆ ಗೋಣಿಬೀಡು ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಂವಾದ ಹಾಗೂ ಸಭೆಯ ಸಂದರ್ಭದಲ್ಲಿ ಅಭಿನಂದಿಸಲಾಯಿತು.

 

 

Leave a Reply

Your email address will not be published. Required fields are marked *