IMG-20241003-WA0582

 

 

ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಗುರುವಾರ ಚಿಕ್ಕಮಗಳೂರಿನಲ್ಲಿ  ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಂಗಳೂರಿಗೆ ಸಾಗುವ ಮಾರ್ಗ ಮಧ್ಯೆ ಬಣಕಲ್, ಕೊಟ್ಟಿಗೆಹಾರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಂದಿಗೆ ಭೇಟಿಯಾಗಿ ಮಾತನಾಡಿದರು.
ಬಣಕಲ್ ಸರ್ಕಾರಿ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಬೇಕು. ಜನರು ರಾತ್ರಿ ಹೊತ್ತಲ್ಲಿ ಅನಾರೋಗ್ಯರಾದಾಗ ದೂರದ ಮಂಗಳೂರು, ಚಿಕ್ಕಮಗಳೂರು ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲಿಯೇ 24*7 ಸೌಲಭ್ಯ ದೊರೆತರೆ ಬಡವರು ಉತ್ತಮ ಚಿಕಿತ್ಸೆ ಪಡೆಯಬಹುದು ಎಂದು ಮುಖಂಡರಾದ ಹರ್ಷ ಮೆಲ್ವಿನ್ ಲಸ್ರಾದೊ, ಅಬ್ದುಲ್ ರೆಹಮಾನ್ ಮತ್ತಿತರರು ಸಭಾಪತಿಗಳ ಗಮನಕ್ಕೆ ತಂದರು.
ಅಹವಾಲು ಸ್ವೀಕರಿಸಿ ಯು.ಟಿ.ಖಾದರ್ ಮಾತನಾಡಿ’ ಬಣಕಲ್ ಸರ್ಕಾರಿ ಪ್ರಾಥಮಿಕ  ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು. ಕಾಂಗ್ರೆಸ್ ಸರ್ಕಾರ ಬಡವರ ಪರ ಇದ್ದು ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ’ ಎಂದರು.
ಕೊಟ್ಟಿಗೆಹಾರದಲ್ಲಿ ಸಭಾಪತಿ ಯು.ಟಿ.ಖಾದರ್ ಅವರಿಗೆ ಮೂಡಿಗೆರೆ ಪ.ಪಂ.ಸದಸ್ಯ ಜಿ.ಬಿ.ಧರ್ಮಪಾಲ್, ಟಿ.ಎ.ಖಾದರ್, ರಾಮಚಂದ್ರೇಗೌಡ, ಬಿ.ಎಂ.ಸತೀಶ್, ಮೊಯಿದ್ದೀನ್, ಮುನೀರ್, ಪಿಶ್ ಮೋಣು, ಖಾಲೀದ್, ತನುಕೊಟ್ಟಿಗೆಹಾರ ಮತ್ತಿತರ ಮುಖಂಡರು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ