November 6, 2026
;
16ktg1_copy_441x207

 

 


ಮೂಡಿಗೆರೆ ತಾಲ್ಲೂಕಿನ ಹಳೆ ಮೂಡಿಗೆರೆ ಸಂಜೀವಿನಿ ಗ್ರಾಮಪಂಚಾಯ್ತಿ ಮಟ್ಟದ ಒಕ್ಕೂಟದ ವತಿಯಿಂದ 2024-25ನೇ ಸಾಲಿನ ಎರಡನೇ ಮಾಸಿಕ ಸಂತೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪುಟ್ಟಮ್ಮರವರು ಉದ್ಘಾಟಿಸಿದರು.

ಶ್ರೀಮತಿ ಮೋಟಮ್ಮ ಮಾಜಿ ಸಚಿವರು ಮಾತನಾಡಿ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ಸಾಗಿಸಲು ಮತ್ತು ಮುಂದೆ ಬರಲು ಅವರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಮಾಸಿಕ ಸಂತೆ ಮುಖ್ಯ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಯನ್ನಾಡಿದ ಅಬ್ದುಲ್ ನಾಜಿಮ್ ವಲಯ ಮೇಲ್ವಿಚಾರಕರು ಮಾಸಿಕ ಸಂತೆಯ ಉದ್ದೇಶದ ಬಗ್ಗೆ ತಿಳಿಸಿದರು.

ಪಟ್ಟಣ ಪಂಚಾಯತಿ ಅಧ್ಯಕ್ಷರು ಶ್ರೀಮತಿ ಗೀತಾ ರಂಜನ್ ಅಜಿತ್ ಕುಮಾರ್, ಗ್ರಾಮ ಪಂಚಾಯ್ತಿಯ ಅಧ್ಯಕ್ಷರು ಕುಮಾರಿ ರಂಜಿತಾ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಕಲ್ಪನಾ, ತಾಲ್ಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಶ್ರೀಮತಿ ಚಂದ್ರಾವತಿ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಸರೋಜಾ ರವರು ಮಾತನಾಡಿ ಸ್ಟಾಲ್ ಹಾಕಲು ಬಂದ ಎಲ್ಲರಿಗೂ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಚಂದನ್ ಗ್ರೂಪ್ಸ್ ಮಾಲಿಕರು ಮಂಚೇಗೌಡ, ಶ್ರೀಮತಿ ನಿರ್ಮಲ ಮಂಚೇಗೌಡ ಹಾಗು ಒಕ್ಕೂಟದ ಪದಾಧಿಕಾರಿಗಳು, ಚೈತ್ರಾ ವಲಯ ಮೇಲ್ವಿಚಾರಕರು (ಕೌಶಲ್ಯ) ಅಭಿಜಿತ್ ವಲಯ ಮೇಲ್ವಿಚಾಕರು, ತಾಲ್ಲೂಕು ಎಂ ಐ ಎಸ್ ಸಂಯೋಜಕರು ರಶ್ಮಿತಾ ಬಿ ಆರ್, ಪಿ. ಇ. ಪಿ. ಪ್ರೀತಿ ಮತ್ತು ಎಂ. ಬಿ. ಕೆ, ಎಲ್.ಸಿ.ಆರ್.ಪಿ, ಕೃಷಿ ಸಖಿ, ಪಶು ಸಖಿ ಹಾಗು ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *