ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ರೋಟರಿ ಸಂಸ್ಥೆ ವತಿಯಿಂದ ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿತ್ತು.
ಜನ್ನಾಪುರ ವರ್ತಕರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಲೆನಾಡ ಹೊಯ್ಸಳ ಕಲಾಸಿರಿ ಹೆಸರಿನಲ್ಲಿ ನಡೆದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ವಲಯದ ವಿವಿಧ ಘಟಕಗಳು ಭಾಗವಹಿಸಿದ್ದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಣಿಬೀಡು ರೋಟರಿ ಸಂಸ್ಥೆಯ ಅಧ್ಯಕ್ಷ ಹೆಚ್.ಎಸ್. ಪ್ರಸನ್ನ ವಹಿಸಿದ್ದರು. ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ಡಿ.ಎಸ್.ರವಿ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಜಿಲ್ಲೆಯ ವಿವಿಧ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮೂಡಿಗೆರೆ ರೋಟರಿ ಸದಸ್ಯರು ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ ; ಮೂಡಿಗೆರೆ ರೋಟರಿ ಸಂಸ್ಥೆಯ ರಕ್ಷಿಣಿ ರಂಜಿತ್, ಭಾವಗೀತೆಯಲ್ಲಿ ಪ್ರಥಮ ಸ್ಥಾನ, ಡ್ಯುಯೇಟ್ ಸಾಂಗ್ ನಲ್ಲಿ ದಿವ್ಯ ಪ್ರಸಾದ್ ಮತ್ತು ಚೈತ್ರ ತೇಜಸ್ವಿ ಪ್ರಥಮ, ದಿವ್ಯಪ್ರಸಾದ್ ಮತ್ತು ವಿನುತಾ ಪ್ರಸಾದ್ 3ನೇ ಸ್ಥಾನ , ಗ್ರೂಪ್ ಸಾಂಗ್ 2ನೇ ಮತ್ತು 3ನೇ ಸ್ಥಾನ, ಏಕಪಾತ್ರಾಭಿನಯದಲ್ಲಿ ದಿವ್ಯಪ್ರಸಾದ್ ಪ್ರಥಮ ಸ್ಥಾನ, ಚಲನಚಿತ್ರ ಗೀತೆಯಲ್ಲಿ ದಿವ್ಯ ಪ್ರಸಾದ್ ಎರಡನೇ ಸ್ಥಾನ ಪಡೆದು ಮೂಡಿಗೆರೆ ರೋಟರಿ ಸಂಸ್ಥೆ ಒಟ್ಟು 3 ಪ್ರಥಮ ಬಹುಮಾನ, 2 ದ್ವಿತೀಯ ಬಹುಮಾನ, 2 ತೃತೀಯ ಬಹುಮಾನ ಗಳಿಸಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪ್ರಶಸ್ತಿ ವಿಜೇತರಿಗೆ ಮೂಡಿಗೆರೆ ರೋಟರಿ ಸಂಸ್ಥೆ ಅಧ್ಯಕ್ಷ ನರೇಂದ್ರ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.



