oplus_0
ದಲಿತ ಸಾಹಿತ್ಯ ಪರಿಷತ್ತು ಮೂಡಿಗೆರೆ ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ಪಟ್ಟಣದ ತಾ.ಪಂ. ಪಂಡಿತ್ ದೀನ್ ದಯಾಳ್ ಸಭಾಂಗಣದಲ್ಲಿ ನೆರವೇರಿತು. ನೂತನ ಅಧ್ಯಕ್ಷರಾಗಿ ಪಿ.ಕೆ.ಮಂಜುನಾಥ್, ಕಾರ್ಯದರ್ಶಿ ಹೆಸಗಲ್ ವೆಂಕಟೇಶ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಪ್ರದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ : ಯಾವಾಗ ದಲಿತ ಚಳುವಳಿ ಪ್ರಾರಂಭವಾಯಿತೋ ಅಂದಿನಿಂದ ದಲಿತ ಸಾಹಿತ್ಯ ಹುಟ್ಟಿಕೊಂಡಿತು ಎಂದು ಹೇಳಿದರು.
1976 ಪ್ರಾರಂಭಗೊಂಡ ದಲಿತ ಚಳಿವಳಿಯಲ್ಲಿ ಧರ್ಮಸೇನಾ, ಶಾಮಸುಂದರ್, ಸಿದ್ದಪ್ಪ, ಕೆ.ಭೀಮಯ್ಯ, ಭರಣಯ್ಯ, ಆರ್.ರಾಜಯ್ಯ ಬಿ.ಕೃಷ್ಣಪ್ಪ, ಗೋವಿಂದಯ್ಯ ಸೇರಿದಂತೆ ಅನೇಕರು ಮುಂದಾಳತ್ವ ವಹಿಸಿದ್ದರು. ಆಗ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲು ಚಳುವಳಿ ಹಾಡು, ಸಾಹಿತ್ಯ ಹುಟ್ಟಿಕೊಂಡಿತು. ಈಗಲೂ ಆ ಹಾಡುಗಳನ್ನು ಎಲ್ಲಾ ಸಂಘಟನೆಗಳು ಬಳಸಿಕೊಳ್ಳುವುದು ಸ್ಮರಿಸಬಹುದು ಎಂದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಸಾಕ್ಷರತಾ ಚಳುವಳಿಯಲ್ಲಿ ದಲಿತ ಸಾಹಿತ್ಯ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದರಿಂದ ಇಂದಿಗೂ ದಲಿತ ಸಾಹಿತ್ಯ ಗಟ್ಟಿಯಾಗಲು ಕಾರಣವಾಗಿದೆ. ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲು ತಾಲೂಕು ಸೇರಿದಂತೆ ಎಲ್ಲಾ ಗ್ರಾಮೀಣ ಭಾಗದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಘಟನಗಳನ್ನು ಪ್ರಾರಂಭಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ , ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಎಸ್.ಬಿ.ಹಾಲಯ್ಯ ವಹಿಸಿದ್ದರು. ಮೈಸೂರು ದಸಾಪ ವಿಭಾಗೀಯ ಸಂಯೋಜಕ ಡಾ.ಚಂದ್ರಗುಪ್ತ, ವಿಭಾಗೀಯ ಸಂಯೋಜಕ ಡಾ.ಚಂದ್ರಗುಪ್ತ, ವಿವಿಧ ಪಕ್ಷ, ಸಂಘಟನೆ ಮುಖಂಡರಾದ ಎಲ್.ಬಿ.ರಮೇಶ್, ಯು.ಬಿ.ಮಂಜಯ್ಯ, ಮುತ್ತಪ್ಪ, ಮಹೇಂದ್ರ ಮೌರ್ಯ, ಕರವೇ ವಿನೋಧ್, ಸುಧೀರ್ ಚಕ್ರಮಣಿ, ಸುರೇಂದ್ರ ಉಗ್ಗೆಹಳ್ಳಿ, ಗಿರೀಶ್ ಹೆಸಗಲ್, ಬಕ್ಕಿ ರವೀಂದ್ರ, ಬಕ್ಕಿ ಮಂಜು, ಸುಂದ್ರೇಶ್ ಕನ್ನಾಪುರ, ಸಿದ್ದೇಶ್ ಕೆಸವೊಳಲು, ಸಚಿನ್ ಬಾನಳ್ಳಿ, ಲೋಕೇಶ್ ಅಜ್ಜಂಪುರ, ಶೇಖರಪ್ಪ ತರಿಕೆರೆ, ಮೈಲಾರಪ್ಪ ಕಡೂರು ಮತ್ತಿತರರಿದ್ದರು.




