CEIR (Central Equipment Identity Register) ಪೋರ್ಟಲ್ ಬಳಸಿ ಪತ್ತೆ ಮಾಡಲಾದ ಸುಮಾರು ರೂ. 2.2 ಲಕ್ಷ ಮೌಲ್ಯದ 11 ಮೊಬೈಲ್ ಫೋನ್ ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಿಂದಿರುಗಿಸಲಾಗಿದೆ.
ಈ ಬಗ್ಗೆ ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ತಿಳಿಸಿರುವಂತೆ, ಒಂದು ವೇಳೆ ನೀವು ನಿಮ್ಮ ಮೊಬೈಲ್ ಫೋನ್ ಕಳೆದು ಕೊಂಡಲ್ಲಿ, ಮೊಬೈಲ್ ಫೋನ್ ಗೆ ಸಂಬಂಧಪಟ್ಟ ದಾಖಲಾತಿಗಳು, ನಿಮ್ಮ ಗುರುತಿನ ಪುರಾವೆ, KSP Mobile App ಮೂಲಕ ಪೊಲೀಸ್ ಕಂಪ್ಲೆಂಟ್ ಪ್ರತಿ ಪಡೆದು, CEIR ವೆಬ್ ಪೋರ್ಟಲ್: https://www.ceir.gov.in ರಲ್ಲಿ ವರದಿ ದಾಖಲಿಸಲು ಕೋರಿದೆ.


