kole1

 

 

ಪತ್ನಿ ಹಾಗೂ ತನ್ನ 4 ವರ್ಷದ ಮಗುವನ್ನು ಹತ್ಯೆಗೈದ ವ್ಯಕ್ತಿಯೊಬ್ಬ ತಾನೂ ಚಲಿಸುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಮಂಗಳೂರು ಸಮೀಪದ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಆತ್ಮಹತ್ಯೆ ಶರಣಾದ ವ್ಯಕ್ತಿಯನ್ನು ಮಂಗಳೂರಿನ ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ಎಂದು ಗುರ್ತಿಸಲಾಗಿದೆ. ಇನ್ನು ಹತ್ಯೆಯಾದವರನ್ನು  ಪ್ರಿಯಾಂಕಾ (28), ಗಂಡು ಮಗು ಹೃದಯ (4) ಎಂದು ಗುರ್ತಿಸಲಾಗಿದೆ.

ಆತ್ಮಹತ್ಯೆಗೆ ಶರಣಾದ ಕಾರ್ತಿಕ್ ಭಟ್ ಸಹಕಾರಿ ಬ್ಯಾಂಕ್​ನಲ್ಲಿ ಉದ್ಯೋಗ ಮಾಡಿಕೊಂಡಿದ್ದ ಕಾರ್ತಿಕ್ ಭಟ್​ ಅವರು ಶುಕ್ರವಾರವೇ ಪತ್ನಿ, ಮಗನನ್ನು ಕೊಂದು ಬಳಿಕ ತಾನೂ ಮುಲ್ಕಿ ಹೊರವಲಯದ ಬೆಳ್ಳಾಯುರುವಿನಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈಲ್ವೆ ಪೊಲೀಸರು ಕಾರ್ತಿಕ್ ಮನೆ ವಿಳಾಸ ಹುಡುಕಿಕೊಂಡು ಅವರ ಫ್ಲ್ಯಾಟ್ ಗೆ ಬಂದಾರ ಪತ್ನಿ, ಪುತ್ರನ ಶವ ಪತ್ತೆ ಆಗಿದೆ.

ಸೊಸೆ ಮತ್ತು ಮೊಮ್ಮಗನ ಮೃತದೇಹ ಮನೆಯಲ್ಲಿದ್ದರೂ ವೃದ್ಧ ಅತ್ತೆ ಮಾವನಿಗೆ ಗೊತ್ತೆ ಆಗಿಲ್ಲ. ಕಾರ್ತಿಕ್ ಪತ್ನಿಗೆ ತನ್ನ ಮಾವ ಅತ್ತೆಯೊಂದಿಗೆ ಮನಸ್ತಾಪವಿದ್ದ ಮಾಹಿತಿ ಇದೆ. ಮನೆಯ ಕೋಣೆಯಲ್ಲಿ ಮತೃ ಕಾರ್ತಿಕ್ ಕುಟುಂಬ ಪ್ರತ್ಯೇಕವಾಗಿದ್ದು, ಇಡೀ ದಿನ ಮನೆಯ ಕೋಣೆಯಲ್ಲೇ ಇರುತ್ತಿದ್ದರು ಎನ್ನಲಾಗಿದೆ.

ಕಾರ್ತಿಕ್ ಅವರ ತಂದೆ ಪಕ್ಷಿಕೆರೆ ಮುಖ್ಯ ಜಂಕ್ಷನ್ ನಲ್ಲಿರುವ ಹೋಟೆಲ್ ಅನ್ನು   ನಡೆಸುತ್ತಿದ್ದರು.

ನವೆಂಬರ್ 8 ರಂದು ಮಧ್ಯಾಹ್ನ 12:40 ರ ಸುಮಾರಿಗೆ ಕಾರ್ತಿಕ್ ಭಟ್ ಅವರು ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಾಪುರ ರೈಲು ನಿಲ್ದಾಣದ ಬಳಿ ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಕಾರ್ತಿಕ್ ಅವರು ಶಿವಮೊಗ್ಗ ಮೂಲದ ಪ್ರಿಯಾಂಕ ಅವರನ್ನು 6 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗಳಿಗೆ ನಾಲ್ಕು ವರ್ಷದ ಮಗುವಿತ್ತು. ಕಾರ್ತಿಕ್ ಅವರು ತಮ್ಮ ಪೋಷಕರೊಂದಿಗೆ ಒಂದೇ ಸೂರಿನಲ್ಲಿ ವಾಸವಿದ್ದರೂ, ಪೋಷಕರು ಹಾಗೂ ಕಾರ್ತಿಕ್ ಪತ್ನಿಯ ನಡುವೆ ಮನಸ್ತಾಪ ಇದ್ದುದ್ದರಿಂದ ಒಂದೇ ಮನೆಯಲ್ಲಿದ್ದರೂ ಅವರ ಕುಟುಂಬ ಎರಡು ರೂಮಿನಲ್ಲಿ ಪ್ರತ್ಯೇಕ ವಾಸವಿತ್ತು.

ಇನ್ನು ಕಾರ್ತಿಕ್ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ತಾನೇ ಪತ್ನಿ ಹಾಗೂ ಮಗುವನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿರುವುದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಅಪರಾಧ ತನಿಖಾ ದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದು, ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪತ್ನಿ ತನ್ನ ಪೋಷಕರೊಂದಿಗೆ ಹೊಂದಿಕೊಂಡು ಹೋಗದೇ ಇದ್ದುದ್ದರಿಂದ  ನಿತ್ಯ ಕಿರಿಕಿರಿಯಾಗುತ್ತಿತ್ತು, ಈ ಕಾರಣದಿಂದ ಕಾರ್ತಿಕ್ ಪತ್ನಿಯ ಮೇಲೆ ತೀವ್ರ ಅಸಮದಾನ ಹೊಂದಿದ್ದರು ಪತ್ನಿಯ ಕೊಲೆಗೆ ಇದೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ