21ktg1

 

 

ಕಪುಚಿನ್ ಕೃಷಿಕ ಸೇವಾಕೇಂದ್ರ (ರಿ) ವಿಮುಕ್ತಿ ಬಣಕಲ್ ಮಕ್ಕಳ ಗ್ರಾಮ ಸಭೆ ಪೂರ್ವಭಾವಿ ತಯಾರಿ ಕಾರ್ಯಕ್ರಮವನ್ನು ಬಣಕಲ್ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಯನ್ನು ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜರಿನಾರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ಮಾದರಿ ಮಕ್ಕಳ ಗ್ರಾಮ ಸಭೆಯನ್ನು ಮಾಡಲು ಆಯೋಜಿಸಿದ್ದು ಬಣಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಶಾಲೆಗಳ ಮಕ್ಕಳು ಭಾಗವಹಿಸಲು ಅವಕಾಶ ನೀಡಿ ಮತ್ತು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಕಾರವಾಗಲಿದೆ ಎಂದರು.

ಶಾಲಾ ಮಕ್ಕಳಿಗೆ ಮಕ್ಕಳ ಗ್ರಾಮ ಸಭೆ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಇರುವ ಸಮಸ್ಯೆಗಳ ಬಗ್ಗೆ ಸುದೀರ್ಘವಾದ ಕಾರ್ಯಗಾರವನ್ನು ಸಂಪನ್ಮೂಲ ವ್ಯಕ್ತಿಯಾದ ನವೀನ್ ಆನೆದಿಬ್ಬರವರು ನಡೆಸಿಕೊಟ್ಟರು.

ಕಾರ್ಯಗಾರದಲ್ಲಿ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಹಾಗೂ ಯಾವುದೇ ವಿಷಯಗಳಲ್ಲಿ ಕಲಿಕೆಯಾಗುವುದು ಬಹಳ ಅವಶ್ಯಕತೆ. ಶಿಕ್ಷಣ ನಮಗೆ ದಾರಿದೀಪವಾಗುತ್ತದೆ ಎಂದು ವಿಮುಕ್ತಿ ನಿರ್ದೇಶಕರಾದ ಫಾದರ್ ಎಡ್ವಿನ್ ಡಿಸೋಜ ರವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಉರ್ದು ಶಾಲೆ. ರಿವರ್ ವ್ಯೂ ಶಾಲೆ, ನಜರೆತ್ ಶಾಲೆ, ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಕಾರ್ಯಗಾರವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಎಮ್‍ಪಿಎಮ್ ಟ್ರಸ್ಟ್ ಅಧ್ಯಕ್ಷರಾದ ವಿ.ಪಿ ನಾರಾಯಣ್, ವಿಮುಕ್ತಿ ಕಾರ್ಯಕರ್ತೆ ವಿಂದ್ಯ, ಶಾಲೆಯ ಶಿಕ್ಷಕ ಶಿಕ್ಷಕಿಯರು, ಪೆÇೀಷಕರು ಮತ್ತು ಇತರರು ಇದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ