ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾವಳಿ ವಲಯದ ಗಬ್ಗಲ್ ಕೂವೆ ಹುಯಿಲುಮನೆ ಕಾರ್ಯಕ್ಷೇತ್ರದಲ್ಲಿ ವಲಯ ಮಟ್ಟದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ನಿರ್ದೇಶಕರು ಸದಾನಂದ ಬಂಗೇರ ಉದ್ಘಾಟನೆ ಮಾಡಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ಕೆ ಟಿ ಹರೀಶ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೂವೆ ಗ್ರಾಮ ಪಂಚಾಯತ್ ಅಧ್ಯಕ್ಷರು ಶಶಿತಾ ಮತ್ತು ಕೃಷಿ ಸಹಕಾರ ಪತ್ತಿನ ಅಧ್ಯಕ್ಷರಾದ ಶಿವರಾಜ್ ಗೌಡ್ರು ಮತ್ತು ಕೂವೆ ಗ್ರಾಮ ಪಂಚಾಯಿತಿ ಪಿಡಿಒ ನವೀನ್ ಕುಮಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಸುರೇಶ್ ಗಬ್ಗಲ್, ಪ್ರೌಢಶಾಲೆಯ ಕಮಿಟಿ ಅಧ್ಯಕ್ಷರು ಸುಮಿತ್ರ ಹಾಗೂ ಶಾಲಾ ಮುಖ್ಯ ಶಿಕ್ಷಕರು, ಕಾಮಿಡಿ ಕಿಲಾಡಿ ಸ್ಟಾರ್ ರಮೇಶ್ ಯಾದವ್, ಶೌರ್ಯ ಘಟಕದ ಪ್ರತಿನಿಧಿಗಳಾದ ಸಾಗರ್ ಚಂದ್ರಶೇಖರ್, ಒಕ್ಕೂಟದ ಅಧ್ಯಕ್ಷರು ಸಂತೋಷ ಹಾಗೂ ಮಹೇಶ್, ಸತ್ಯನಾರಾಯಣ ಪೂಜಾ ಸಮಿತಿಯ ಸದಸ್ಯರು, ಮದ್ಯವ್ಯರ್ಜನ ವ್ಯವಸ್ಥಾಪನೆ ಸಮಿತಿ ಅಧ್ಯಕ್ಷರು, ವಲಯದ ಮೇಲ್ವಿಚಾರಕರು, ಸಂದೇಶ ಹಾಗೂ ಒಕ್ಕೂಟದ ಅಧ್ಯಕ್ಷರುಗಳು ಪದಾಧಿಕಾರಿಗಳು, ದಾಖಲಾತಿ ಸಮಿತಿಯ ಸದಸ್ಯರು ಹಾಗೂ ಸಂಘಗಳ ಸದಸ್ಯರು ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.



