no liquor

 

 

ದತ್ತಜಯಂತಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ನ.ರಾ.ಪುರ, ತರೀಕೆರೆ & ಕಡೂರು ತಾಲ್ಲೂಕುಗಳ ವ್ಯಾಪ್ತಿಗಳಲ್ಲಿ ದಿನಾಂಕ 13.12.2024 ಬೆಳಿಗ್ಗೆ 6.00 ಗಂಟೆಯಿಂದ 14.12.2024 ರಾತ್ರಿ 11.00 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ  ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು

ದಿನಾಂಕ: 12.12.2024 ರಿಂದ 14.12.2024ರವರೆಗೆ ಚಿಕ್ಕಮಗಳೂರು ನಗರ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮತ್ತು ಜಿಲ್ಲೆಯಾದ್ಯಂತ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂಪರ ಸಂಘಟನೆಗಳ ವತಿಯಿಂದ ದತ್ತಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ದಿನಾಂಕ: 12.12.2024 ರಂದು ಚಿಕ್ಕಮಗಳೂರು ನಗರದಲ್ಲಿ ಅನುಸೂಯ ಜಯಂತಿ ಆಚರಣೆ ಮಾಡಲಿದ್ದು, ಸದರಿ ಅನುಸೂಯ ಜಯಂತಿ ಮೆರವಣಿಗೆಯಲ್ಲಿ ಸುಮಾರು 2,500 ರಿಂದ 3,000 ಜನ ಮಹಿಳಾ ಭಕ್ತಾದಿಗಳು/ಕಾರ್ಯಕರ್ತರು ಭಾಗವಹಿಸಲಿರುತ್ತಾರೆ.

ದಿನಾಂಕ: 13.12.2024 ರಂದು ಚಿಕ್ಕಮಗಳೂರು ನಗರದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬೃಹತ್ ಶೋಭಾಯಾತ್ರೆಯನ್ನು ನಡೆಸಲಿರುತ್ತಾರೆ. ಸದರಿ ಶೋಭಾಯಾತ್ರೆಯಲ್ಲಿ ಸುಮಾರು 30000-35000 ಜನ ಭಕ್ತಾದಿಗಳು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಸ್ವಾಮೀಜಿಗಳು, ಮಠಾಧೀಶರು ಭಾಗವಹಿಸಲಿರುತ್ತಾರೆ. ದಿನಾಂಕ: 14.12.2024 ರಂದು ಬೆಳಿಗ್ಗೆ 4.00 ಗಂಟೆಯಿಂದ ಭಕ್ತಾದಿಗಳು ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆಯಲಿರುತ್ತಾರೆ. ಸದರಿ ಕಾರ್ಯಕ್ರಮದಲ್ಲಿ ಸುಮಾರು 25,000 ರಿಂದ 30,000 ಜನ ದತ್ತಮಾಲಾಧಾರಿಗಳು, ಸಂಘ ಪರಿವಾರದ ಮುಖಂಡರು/ ಕಾರ್ಯಕರ್ತರು, ಮಠಾಧೀಶರು, ರಾಜಕೀಯ ಮುಖಂಡರು ಭಾಗವಹಿಸಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ, ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮತ್ತು ಜಿಲ್ಲೆಯಾಧ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿರುತ್ತದೆ.

ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಆಲ್ದೂರು, ಮೂಡಿಗೆರೆ, ಕೊಪ್ಪ, ಬಾಳೆಹೊನ್ನೂರು, ಜಯಪುರ, ಶೃಂಗೇರಿ, ತರೀಕೆರೆ, ಕಡೂರು ಮತ್ತು ಇತರೆ ಕೆಲವು ಪಟ್ಟಣ / ಪ್ರದೇಶಗಳು ಮತೀಯವಾಗಿ ಕೋಮು ಸೂಕ್ಷ್ಮ ಪ್ರದೇಶಗಳಾಗಿದ್ದು, ದತ್ತಜಯಂತಿ ಆಚರಣೆ ಕಾಲಕ್ಕೆ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಇತರೆ ಹಿಂದೂ ಪರ ಸಂಘಟನೆಗಳ ಕೆಲವು ಮುಖಂಡರುಗಳು ಮಾಡುವ ಪ್ರಚೋಧನಕಾರಿ ಭಾಷಣ/ನೀಡುವ ಹೇಳಿಕೆಗಳಿಂದ ಕೋಮು, ಸೌಹಾರ್ದತೆ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಗಳಿರುತ್ತದೆ. ಹಿಂದೂ ಮುಖಂಡರು/ರಾಜಕೀಯ ಮುಖಂಡರುಗಳ ಪ್ರಚೋದನಕಾರಿ ಭಾಷಣ ಹೇಳಿಕೆಗಳಿಂದ ಕೆಲವು ಮದ್ಯ ವ್ಯಸನಿಗಳು/ಯುವಕರು/ ಕಿಡಿಗೇಡಿಗಳು ಕುಡಿದು ಗಲಾಟೆ, ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇದ್ದು, ಇದರಿಂದ ಹಿಂದೂಗಳು ಹಾಗೂ ಅನ್ಯ ಕೋಮಿನ ನಡುವೆ ಮತೀಯ ಸಂಘರ್ಷ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಮತ್ತು ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ದಿನಾಂಕ: 12.12.2024ರ ಬೆಳಿಗೆ 6.00 ಗಂಟೆಯಿಂದ ರಿಂದ ದಿನಾಂಕ: 14.12.2024ರ ರಾತ್ರಿ 11.00 ಗಂಟೆಯವರೆಗೆ ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ತರೀಕೆರೆ ಮತ್ತು ಕಡೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಕೋರಿ ಉಲ್ಲೇಖದಂತೆ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರುರವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಪರಿಗಣಿಸಿ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿದಿನಾಂಕ 13.12.2024 ಬೆಳಿಗ್ಗೆ 6.00 ಗಂಟೆಯಿಂದ 14.12.2024 ರಾತ್ರಿ 11.00 ಗಂಟೆಯವರೆಗೆ ಕರ್ನಾಟಕ ಅಬಕಾರಿ ಅಧಿನಿಯಮ 1965 ವಿಧಿ 21ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ಎಲ್ಲಾ ನಮೂನೆಯ ಮದ್ಯದಂಗಡಿಗಳನ್ನು ಮುಚ್ಚುವಂತೆಯೂ ಹಾಗೂ ಮದ್ಯ, ಬೀರ್, ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ