madya 4

 

 

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಲಕ್ಕವಳ್ಳಿ ಗ್ರಾಮದಲ್ಲಿ1890ನೇ ಮದ್ಯ ವರ್ಜನ ಶಿಬಿರವು ಜನ ಜಾಗೃತಿ ವೇದಿಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯಿತು.

ಸಮರೋಪ ಸಮಾರಂಭದ ಉದ್ಘಾಟನೆಯನ್ನು ಮಾಡಿದ ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಧರ್ಮೋಸ್ಥಾನ ಟ್ರಸ್ಟಿನ ಟ್ರಸ್ಟಿ ಆದ ಪ್ರಶಾಂತ್ ಚಿಪ್ರಗುತ್ತಿರವರು ಪ್ರಾಸ್ತವಿಕವಾಗಿ ಮಾತನಾಡುತ್ತಾ, ದುಶ್ಚಟಗಳು ಮನುಷ್ಯ ದೈಹಿಕವಾಗಿ, ಮಾನಸಿಕವಾ,ಗಿ ಬೌದ್ಧಿಕವಾಗಿ, ಆರ್ಥಿಕವಾಗಿ ಬಡವನಾಗುವಂತೆ ಮಾಡುತ್ತವೆ. ಅದರ ಜೊತೆ ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ತನ್ನ ಕುಟುಂಬ, ಸಮಾಜ ಹಾಗೂ ದೇಶವನ್ನೇ ಬಡತನಕ್ಕೆ ದುಡುತ್ತಾನೆ. ಜೊತೆಗೆ ಸಂಸ್ಕಾರ ಹಾಗೂ ಮೌಲ್ಯದಾರಿತ ಜೀವನವನ್ನು ನಡೆಸಲು ಮದ್ಯಪಾನ ದೊಡ್ಡ ಕಂಟಕವಾಗಿದೆ ಎಂದರು.

ಇದರ ಬಗ್ಗೆ ಮಾದಕ ವಸ್ತು ಸೇವನೆ ಮಾಡುವವರು ಎಚ್ಚರಿಕೆಯಿಂದ ಇರಬೇಕಾಗಿದ್ದು ಹಾಗೂ ಈ ಕೂಡಲೇ ಸರಕಾರ ತನ್ನ ಪ್ರಜೆಗಳು ಹಾಗೂ ದೇಶವನ್ನು ಉಳಿಸುವ ಸಲುವಾಗಿ ಮದ್ಯಪಾನವನ್ನು ನಿಷೇಧ ಮಾಡಬೇಕೆಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮರುಳ ಸಿದ್ದ ಪಾಂಡಿತ್ಯಾರಾದ್ಯ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ ಶ್ರೀ ಧರ್ಮಸ್ಥಳ ಸಂಘವು ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿದ್ದು ಅದರಲ್ಲಿ ಮದ್ಯವ್ಯರ್ಜನ ಶಿಬಿರವು ನಿಮ್ಮ ಜೀವನಕ್ಕೆ ಹೊಸ ಬೆಳಕನ್ನು ನೀಡಿ ಹೊಸ ಜೀವನದ ಕಡೆ ಕರೆದುಕೊಂಡು ಹೋಗುವಂತೆ ಮಾಡಿದೆ. ಶ್ರೀ ವೀರೇಂದ್ರ ಹೆಗ್ಗಡೆಯವರು ಹಾಕಿಕೊಟ್ಟಂತ ಮಾರ್ಗದರ್ಶನ ಸೂಕ್ತವಾದದ್ದು ಅದನ್ನು ಎಲ್ಲಾ ಪಾಲಿಸಬೇಕು ಹಾಗೂ ಪ್ರೋತ್ಸಾಹಿಸಬೇಕು. ಅವರ ಎಲ್ಲಾ ಕಾರ್ಯಕ್ರಮದ ಜೊತೆ ನಾವು ಇರುತ್ತೇವೆ ಎಂದು ಹೇಳಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಎ.ಸಿ. ಚಂದ್ರಪ್ಪನವರು ಮಾತನಾಡಿ ಮಧ್ಯವರ್ಜನ ಶಿಬಿರ ಲಕ್ಷಾಂತರ ಜನರ ಬಾಳಿಗೆ ಹೊಸ ಬದುಕನ್ನು ಕೊಟ್ಟಿದೆ ಎಂದು ಹೇಳಿದರು.

ವೇದಿಕೆಯ ಸದಸ್ಯ ಅಸ್ಲಾಂ ಖಾನ್ ರವರು ಶ್ರೀ ಧರ್ಮಸ್ಥಳ ಯೋಜನೆಯ ಕೆಲಸವನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ, ಯೋಜನಾಧಿಕಾರಿ ಕುಸುಮಾದರ್, ಯೋಜನೆಯ ಸದಸ್ಯರಾದ ಮಲ್ಲಪ್ಪ ಹಾಗೂ ಮಧ್ಯ ವಜನ ಶಿಬಿರದ ಅಧ್ಯಕ್ಷರಾದ ಪರಮೇಶ್ವರ್ ಹಾಗೂ ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ