bajaranga

 

 

ಮೂಡಿಗೆರೆ ತಾಲ್ಲೂಕಿನ ಜನ್ನಾಪುರದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ವತಿಯಿಂದ ದತ್ತ ಜಯಂತಿಯ ಅಂಗವಾಗಿ ಬೃಹತ್ ಶೋಭಾ ಯಾತ್ರೆ ಮತ್ತು ಹಿಂದೂ ಸಂಗಮ ಏರ್ಪಡಿಸಲಾಯಿತು

ಯಾವ ವಾಗ್ಮಿ ಹಾರಿಕಾ ಮಂಜುನಾಥ್ ಮಾತನಾಡಿ ಹಿಂದೂಗಳ ಹೃದಯ ಧರ್ಮದಲ್ಲಿ ಹನುಮಂತನು ಪ್ರತಿಷ್ಠಾಪನೆಯಾದ ದಿನ ಹಿಂದೂಗಳು ಜಾಗೃತರಾಗುತ್ತಾರೆ ಆ ಹನುಮಂತನ ಪ್ರತಿಷ್ಠಾಪನೆ ಅಷ್ಟು ಜಾಗೃತಿ ನಮ್ಮ ಹಿರಿಯರಿಂದ ಬಂದಿದ್ದರಿಂದಲೆ ಆ ಜಾಗೃತಿಯ ಮೂಲಕ ಆ ಶೌರ್ಯದ ಮೂಲಕ ಹೋರಾಟಗಳನ್ನು ಮಾಡಿ ಆ ಹಿರಿಯರು ದತ್ತಪೀಠವನ್ನು ನಮ್ಮ ಕೈಗೆ ಕೊಟ್ಟಿದಾರೆ. ದತ್ತಪೀಠದಲ್ಲಿ ದತ್ತ ಪಾದುಕೆಯ ಮುಂದೆ ವೇದೋಕ್ತವಾಗಿ ಒಂದು ದೀಪವನ್ನು ಹಚ್ಚಬೇಕಾದರೆ ದಶಕಗಳ ಕಾಲ ಹೋರಾಡಬೇಕಾಯಿತು. ಇಂತಹ ಸಂದರ್ಭದಲ್ಲಿ ಮಾಲಾಧಾರಿಗಳು ಮಾಲೆ ಧರಿಸಿಕೊಂಡು ಹೋಗುವ ಸಂದರ್ಭದಲ್ಲಿ ದತ್ತ ಪೀಠಕ್ಕೆ ಹೋದಂತಹ ಎಷ್ಟೋ ಜನ ಮಾಲಾಧಾರಿಗಳು ವಾಪಸ್ಸು ಬರುವ ಖಾತ್ರಿ ಇರಲಿಲ್ಲ ಅಷ್ಟು ವಿರೋಧಗಳ ಮಧ್ಯದಲ್ಲಿಯೂ ಕಷ್ಟ ಕಾರ್ಪಣ್ಯಗಳ ಮಧ್ಯದಲ್ಲಿಯೂ ನಮ್ಮ ಹಿರಿಯರು ಒಂದೇ ಒಂದು ವರ್ಷ ಬಿಡದ ಹಾಗೆ ಎಂತಹ ಕಠಿಣ ಪರಿಸ್ಥಿತಿ ಬಂದರೂ ಮಾಲೆಗಳನ್ನು ಧರಿಸಿ ದತ್ತಪೀಠಕ್ಕೆ ಹೋಗಿ ದತ್ತ ಪಾದುಕೆಗೆ ಪ್ರಮಾಣ ಮಾಡಿ ಹಿಂದೂ ಆಗಿ ಜನನ ಹಿಂದುತ್ವಕ್ಕಾಗಿಯೇ ಮರಣ ಎಂಬ ಹೋರಾಟದ ಪಣವನ ತೊಟ್ಟಿದ್ದೇವೆ.

ಒಂದು ಕಾಲದಲ್ಲಿ ಅಖಂಡವಾಗಿದ್ದ ಭಾರತವನ್ನು ರಾತೋ ರಾತ್ರಿ ತ್ರಿಕಂಡವನ್ನಾಗಿ ಮಾರ್ಪಡಿಸಿದ್ದು ಭಾರತದ ಗಡಿಯಲ್ಲಿ ಸುಮಾರು 20 ಲಕ್ಷ ಹಿಂದೂಗಳ ನರಮೇಧ ನಡೆಯಿತು ಲಾಹೂರ್ ನಲ್ಲಿ ರೈಲು ಹತ್ತಿದಂತಹ ಒಬ್ಬೇ ಒಬ್ಬ ಹಿಂದೂ ಜೀವಂತವಾಗಿ ಬರಲಿಲ್ಲ ಬದಲಿಗೆ ಹಿಂದೂಗಳ ರಾಶಿ ರಾಶಿ ಹೆಣವನ್ನು ಕಳಿಸಿಕೊಟ್ಟು ಆ ರೈಲಿನ ಹಿಂದೆ ಪಟೇಲ್ ಮತ್ತು ನೆಹರು ಅವರಿಗೆ ಸ್ವತಂತ್ರದ ಉಡುಗೊರೆಯನ್ನು ಕೊಡುತ್ತಿದ್ದೇವೆ ಎಂದು ಬರೆದು ಕಳಿಸಿದ್ದರು. ಹಿಂದೂ ಮಲಗಿದ್ದರೆ ಮಾತ್ರ ಕುಂಭಕರ್ಣ ಎದ್ರೆ ವೀರಭದ್ರ ಹಿಂದೂಗಳು ಜಾಗೃತರಾಗಿ ಎಂಬ ಸಂದೇಶವನ್ನು ಕುವೆಂಪು ಅವರು ಹೇಳಿದರು ಹಿಂದೂಗಳ ಜಾಗೃತರಾಗ ಬೇಕಾದರೆ ಹಿಂದೂವಿನ ಮನಸ್ಸಿನಲ್ಲಿ ಹನುಮಂತನು ಅನುಕರಿಸ ಬೇಕಾಗುತ್ತದೆಂದರು.

ವಿಶ್ವ ಹಿಂದೂ ಪರಿಷತ್ ತಾಲೋಕು ಅಧ್ಯಕ್ಷರಾದ ಸಾಲುಮರ ಮಹೇಶ್ ಮಾತನಾಡಿ ಪ್ರಸ್ತುತ ವಿದ್ಯಮಾನ ಇರಬಹುದು ಹಿಂದೆ ನೆಡೆದಂತಹದ್ದು ಇರಬಹುದು ಹಿಂದೂ ಸಮಾಜದ ಹಿಂದೂ ಧರ್ಮದ ಹಿಂದೂ ಸಹೋದರಿಯರಿಗೆ ಏನಾದರು ಆಪತ್ತು ಬಂದಲ್ಲಿ ತಕ್ಷಣ ಮುನ್ನೂರ ಅರವತ್ತೈದು ದಿನಗಳು ನಿರಂತರ ಕಾಲ ಹೋರಾಟ ಮಾಡುವದು ಇದೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳು. ನಮ್ಮ ಸಂಘಟನೆಗಳ ಹೊರಾಟಗಳು ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳಿಗೆ ಹಿಂದೂತ್ವದ ಉಳಿವಿಗಾಗಿ ನಮ್ಮ ಹೋರಾಟ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಕಾರ್ಯದರ್ಶಿ ವಿನಯ್ ಶೆಟ್ಟಿ , ಜಿಲ್ಲಾ ಸಹ ಸಂಯೋಜಕ ಅಭಿ ಬಣಕಲ್, ಗೋರಕ್ಷಕ ಪ್ರಮುಖ್ ಅಜಿತ್ ಜೇನುಬೈಲ್, ತಾಲೂಕು ಸಂಯೋಜಕ ಸಂತೋಷ್ ಶುಭನಗರ, ಸಹ ಸಂಯೋಜಕ ಕಾರ್ತಿಕ್ ಕನ್ನಹಳ್ಳಿ, ಗೋರಕ್ಷಕ ಸಂಯೋಜಕ ರಾಜು ಮತ್ತು ಅಶೋಕ್ ಮುಖಂಡರುಗಳಾದ ದೀಪಕ್ ದೊಡ್ಡಯ್ಯ, ವಿನೋದ್ ಕಣಚೂರ್ ಜೆಎಸ್ ರಘು, ಸುನಿಲ್ ನಿಡುಗುಡು, ಪ್ರವೀಣ್ ನಿಡುಗುಡು, ಭರತ್ ವಾಲೆಕರಟಿ, ಚಿರಾಗ್, ಸುನಿಲ್ ಮಣ್ಣಿಕೆರೆ , ಗಿರೀಶ್ ಪೂಜಾರಿ, ನೇತ್ರ ಹಾಗೂ ಗೋಣಿ ಬಿಡು ಹೋಬಳಿಯ ಸಮಸ್ತ ಹಿಂದೂ ಬಾಂಧವರು ಪಾಲ್ಗೊಂಡಿದ್ದರು.

ವರದಿ :  ಸಿ.ಎಲ್.ಪೂರ್ಣೇಶ್ ಚಕ್ಕೂಡಿಗೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ