September 11, 2026
;
IMG-20241216-WA0062_copy_447x199

 

 

ಯುವಜನರು ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಂಡು, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊ‍ಳ್ಳಬೇಕು ಎಂದು ಜೇಸಿಐ ವಲಯ ಅಧ್ಯಕ್ಷ ವಿಜಯಕುಮಾರ್ ತಿಳಿಸಿದರು.

ಅವರು ಭಾನುವಾರ ಮೂಡಿಗೆರೆ ಜೇಸಿ ಭವನದಲ್ಲಿ ಹಮ್ಮಿಕೊಂಡಿದ್ದ ಮೂಡಿಗೆರೆ ಜೇಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಮಾನವ ಸಂಘಜೀವಿಯಾಗಿದ್ದು, ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವಂತೆ ಎಲ್ಲರೊಳಗೊಂದಾಗಿ ಬಾಳಿದಾಗ ಮಾತ್ರ ನಮ್ಮ ಬದುಕು ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಸಮಾಜದಲ್ಲಿ ಬಡವರು, ದುರ್ಬಲರ ಸೇವೆ ಮಾಡುವ ಮೂಲಕ ಅವರ ನೋವುಗಳಿಗೆ ಸ್ಪಂದಿಸಬೇಕು. ಯುವಕರು ಸಮಾಜಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಇದು ಮನಸಿಗೆ ನೆಮ್ಮದಿ ಮತ್ತು ಬದುಕಿಗೆ ಅರ್ಥವನ್ನು ನೀಡುತ್ತದೆ ಎಂದರು.

ಜೇಸಿಐ ಸಂಸ್ಥೆಯು ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಮತ್ತು ಮಾನವ ಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ ಎಂಬ ದ್ಯೇಯವನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿದೆ. ಜಗತ್ತಿನ ಅತಿದೊಡ್ಡ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿ ಹೊರಹೊಮ್ಮಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜೇಸಿಐ ಸದಸ್ಯರಾಗುವ ಮೂಲಕ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸಮಾಜ ಸೇವೆ ಮಾಡುವ ಅವಕಾಶವು ದೊರೆಯತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಮೂಡಿಗೆರೆ ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ನಟರಾಜ್ ಮಾತನಾಡಿ ; ಮಾನವನ ಮನಸ್ಸು ಎಂಬುದು ಅತ್ಯಂತ ಸೂಕ್ಷ್ಮ ಮತ್ತು ಸದಾ ಚಂಚಲತೆಯಿಂದ ಕೂಡಿರುವಂತಹುದು. ಉತ್ತಮ ಹವ್ಯಾಸ ಮತ್ತು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಮನಸ್ಸನ್ನು ನಿಯಂತ್ರಣ ಮಾಡಬಹುದು. ಇಂದಿನ ಡಿಜಿಟಲ್ ಕಾಲಮಾನದಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರ ಮನಸ್ಸನ್ನು ವಿಚಲಿತಗೊಳಿಸುವ ಅನೇಕ ಸಂಗತಿಗಳು ಸವಾಲುಗಳು ಎದುರಾಗುತ್ತವೆ. ಅವುಗಳ ಬಳಕೆಯಲ್ಲಿ ವಹಿಸಬೇಕಾದ ಎಚ್ಚರಿಕೆ ಮತ್ತು ಕಾನೂನಿನ ಅರಿವು ಮೂಡಿಸುವ ಕೆಲಸವನ್ನು ಸಂಘಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದರು.

ಮೂಡಿಗೆರೆ ಜೇಸಿಐ ನಿರ್ಗಮಿತ ಅಧ್ಯಕ್ಷ ಸುಪ್ರೀತ್ ಕಾರಬೈಲ್ ಮಾತನಾಡಿ ; ಕಳೆದ ಸಾಲಿನಲ್ಲಿ ಮೂಡಿಗೆರೆ ಜೇಸಿಐ ವತಿಯಿಂದ ಆರೋಗ್ಯ ಶಿಬಿರ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ತರಬೇತಿ, ಕ್ಯಾನ್ಸರ್ ಜಾಗೃತಿ, ಮತದಾನ ಜಾಗೃತಿ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದರು.

 ವಲಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ನೂತನ ಸದಸ್ಯರಿಗೆ ಪ್ರಮಾಣವಚನ ಬೋದಿಸಿದರು.

ಘಟಕದ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುನ್ನಹಳ್ಳಿ, ಕಾರ್ಯದರ್ಶಿಯಾಗಿ ಹಮೀದ್ ಸಬ್ಬೇನಹಳ್ಳಿ, ಲೇಡಿ  ಜೇಸಿ ಅಧ್ಯಕ್ಷರಾಗಿ ರೇಖಾ  ನಾಗರಾಜ್, ಕಾರ್ಯದರ್ಶಿಯಾಗಿ ಮೇಘಾ ವಿಕಾಸ್ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ವೇದಿಕೆಯಲ್ಲಿ ಘಟಕಾಧಿಕಾರಿ ಸುದೀಪ್ ತ್ರಿಪುರ,  ದಿವ್ಯಾ ಸುಪ್ರೀತ್, ಶ್ರಾವ್ಯ ಉದಯ್, ಪ್ರಶಂಸಾ ಪ್ರದೀಪ್ ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;