ಮೂಡಿಗೆರೆಯ ಉದ್ಯಮಿ ಯೋಗೇಶ್ ಹೆಚ್.ಕೆ. ಅವರು ಜೆಸಿಐ ಆಲೂಮ್ನಿ ಕ್ಲಬ್ ವಲಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಮೈಸೂರಿನಲ್ಲಿ ನಡೆದ ಜೇಸಿಐ ಅಲ್ಯೂಮಿನಿ ಕ್ಲಬ್ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಸಂಸ್ಕೃತಿ ಸಂಗಮದಲ್ಲಿ ಜೆಸಿಐ ಫ್ಯಾಮಿಲಿ ಹೆಡ್ ರವಿಶಂಕರ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮೈಸೂರಿನ ನಾರ್ತ್ ಅವೆನ್ಯೂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಸಿಐ ಆಲೂಮ್ನಿ ಕ್ಲಬ್ ನ್ಯಾಷನಲ್ ಚೈರ್ಮನ್ ಅನ್ಬಘಾನ್, ನ್ಯಾಷನಲ್ ವೈಸ್ ಚೈರ್ಮನ್ ಕುಮಾರ್ ಕೆ.ಎಸ್., ಇಂಟರ್‌ನ್ಯಾಷನಲ್ ಕಮಿಷನ್ ಚೈರ್ಮನ್ ಭರತ್ ಎನ್. ಆಚಾರ್ಯ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ದೇವರಾಜ್ ಟಿ.ಎನ್., ವಲಯಾಧ್ಯಕ್ಷ-ಚುನಾಯಿತ ವಿಜಯ್ ಕುಮಾರ್, ಪೂರ್ವ ನ್ಯಾಷನಲ್ ವೈಸ್ ಚೈರ್ಮನ್ ನರೇನ್ ಕಾರಿಯಪ್ಪ ಹಾಗೂ ಆಶಾ ಜೈನ್ ಭಾಗವಹಿಸಿದ್ದರು.
ಜೇಸಿಐ ಅಲ್ಯೂಮಿನಿ ಕ್ಲಬ್ 2024ನೇ ಸಾಲಿನ ಅಧ್ಯಕ್ಷ ರಂಗನಾಥ್ ಅವರು ನೂತನ ಅಧ್ಯಕ್ಷ ಯೋಗೇಶ್ ಹೆಚ್.ಕೆ. ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ದೇಶದ ವಿಭಿನ್ನ ಭಾಗಗಳಿಂದ 500 ಕ್ಕೂ ಹೆಚ್ಚು ಆಲೂಮ್ನಿ ಕ್ಲಬ್ ಸದಸ್ಯರು ಭಾಗವಹಿಸಿದರು.
ಯೋಗೇಶ್ ರವರು ಮೂಡಿಗೆರೆ ವಾಸಿಯಾಗಿದ್ದು, ಹೆಚ್.ಕೆ.ವೈ ಅರ್ಥ್ ಮೂವರ್ಸ್ ಮೂಲಕ ಉದ್ದಿಮೆ ಕ್ಷೇತ್ರಕ್ಕೆ ಕಾಲಿಟ್ಟು, ಇಂದು ರಾಜ್ಯದ ಪ್ರಮುಖ ಇರಿಗೇಷನ್ ಪಾಂಡ್ ನಿರ್ಮಾಣ ಮಾಡುವ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದಾರೆ. ಕಾಫಿ ಬೆಳೆಗಾರರು ಆಗಿದ್ದಾರೆ.
ಈ ಹಿಂದೆ, 2019ರಲ್ಲಿ ಜೆಸಿಐ ಮೂಡಿಗೆರೆಯ ಅಧ್ಯಕ್ಷರಾಗಿ, ವಲಯ ಮಂಡಳಿ ಪದಾಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ನೇತೃತ್ವದಲ್ಲಿ ಸಂಸ್ಥೆಯು ಹಲವು ಉಲ್ಲೇಖನೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘಟನೆಯ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸಿತ್ತು.

ಇದೀಗ ಜೇಸಿಐ ಆಲೂಮ್ನಿ ಕ್ಲಬ್ ವಲಯ ಅಧ್ಯಕ್ಷರಾಗಿರುವ ಯೋಗೇಶ್ ಹೆಚ್.ಕೆ. ಅವರ ಶಾಂತ ಸ್ವಭಾವ ಮತ್ತು ನಾಯಕತ್ವ ಕೌಶಲಗಳಿಂದ ವಲಯಕ್ಕೆ ಹೊಸ ದಿಕ್ಕನ್ನು ತರುತ್ತಾರೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ, ಅವರು ಹೊಸ ಯೋಜನೆಗಳು ಮತ್ತು ಸೆವಾ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಜಾರಿ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ.



