sji 2

 

 

ಸಮಾಜದಲ್ಲಿ ಬಡವರ ಮತ್ತು ಅಸಹಾಯಕರ ಸೇವೆಯೇ ಸೀನಿಯರ್ ಛೇಂಬರ್ ಧ್ಯೇಯವಾಗಿದೆ, ನಮ್ಮ ಗಳಿಕೆಯ ಒಂದಂಶವನ್ನು ಸಮಾಜಕ್ಕಾಗಿ ವಿನಿಯೋಗಿಸಿದಾಗ ಅದರಿಂದ ಆತ್ಮತೃಪ್ತಿ ದೊರೆಯುತ್ತದೆ ಮತ್ತು ಬದುಕು ಸಾರ್ಥಕವಾಗುತ್ತದೆ ಎಂದು ಸೀನಿಯರ್ ಛೇಂಬರ್ ರಾಷ್ಟ್ರೀಯ ಅಧ್ಯಕ್ಷ ಚಿತ್ರಕುಮಾರ್ ಹೇಳಿದರು.

ಅವರು ಸೋಮವಾರ ಮೂಡಿಗೆರೆ ಜೇಸಿಭವನದಲ್ಲಿ ಸೀನಿಯರ್ ಛೇಂಬರ್ ಇಂಡಿಯಾ ಮೂಡಿಗೆರೆ ಲೀಜನ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಭೇಟಿ ಹಾಗೂ ವಿಶೇಷಚೇತನ ವ್ಯಕ್ತಿಗಳಿಗೆ ಪರಿಕರ ವಿತರಣೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಪಾರ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಎಲ್ಲಾ ಕಾರ್ಯಗಳನ್ನು ಸರ್ಕಾರವೇ ಮಾಡಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಸಮಾಜದಲ್ಲಿ ಉಳ್ಳವರು ಇಲ್ಲದವರ ನೆರವಿಗೆ ಬಂದಾಗ ಸಮಾಜದ ಬದಲಾವಣೆ ಸಾಧ್ಯ. ನಿಟ್ಟಿನಲ್ಲಿ ಅನೇಕ ಸಂಘಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸೀನಿಯರ್ ಛೇಂಬರ್ ಇಂಡಿಯಾ ಸಹ ಅನೇಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು ವಿಶೇಷ ಚೇತನ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದರು.

ಸೀನಿಯರ್ ಛೇಂಬರ್ ವಲಯ ಉಪಾಧ್ಯಕ್ಷೆ ಪುಷ್ಟ ಶೆಟ್ಟಿ ಮಾತನಾಡಿ ಮಹಿಳೆಯರು ಸಮಾಜಸೇವಾ ಸಂಘಸಂಸ್ಥೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಇಂದಿನ ಯುವಜನರು ಸಾಮಾಜಿಕ ಮಾಧ್ಯಮಗಳಿಗೆ ಮಾರುಹೋಗಿದ್ದು, ತಮ್ಮ ಸುತ್ತಲಿನ ಸಮಾಜದ ಕಡೆಗೆ ಕಣ್ಣು ಹಾಯಿಸುವಷ್ಟು ವ್ಯವದಾನ ಇಲ್ಲವಾಗಿದೆ. ಯುವಕರನ್ನು ಸಮಾಜಸೇವೆಯ ಕಡೆಗೆ ಪ್ರೇರೇಪಿಸುವ ಕಾರ್ಯ ನಡೆಯಬೇಕು ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿನ ಆಯ್ದ ಐದು ಮಂದಿ ವಿಶೇಷಚೇತನರಿಗೆ ವೀಲ್ ಚೇರ್ ಸೇರಿದಂತೆ ವಿವಿಧ ಉಪಕರಣಗಳನ್ನು ವಿತರಿಸಲಾಯಿತು.

ಹಾವು ಹಿಡಿಯುವ ಮತ್ತು ಸಮಾಜ ಸೇವೆಯಲ್ಲಿ ನಿರತರಾಗಿರುವ ಸ್ನೇಕ್ ಆರೀಫ್ ಅವರಿಗೆ ಸೀನಿಯರ್ ಛೇಂಬರ್ ವತಿಯಿಂದ ಉಚಿತವಾಗಿ ಹೆಚ್.ಡಿ.ಎಫ್.ಸಿ. ಬ್ಯಾಂಕ್ ನ ವಿಮೆಯನ್ನು ಮಾಡಿಸಿ ಬಾಂಡ್ ಹಸ್ತಾಂತರಿಸಲಾಯಿತು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ಮತ್ತು ಮೂಡಿಗೆರೆ ಜೇಸಿಐ ಮಾಡಿ ಅಧ್ಯಕ್ಷ ಎಂ.ಡಿ. ಜಯಪಾಲ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸೀನಿಯರ್ ಛೇಂಬರ್ ಇಂಡಿಯಾ ಪೂರ್ವ ವಲಯಾಧಿಕಾರಿ ಎಂ.ಆರ್. ಜಯೇಶ್, ಮೂಡಿಗೆರೆ ಸೀನಿಯರ್ ಛೇಂಬರ್ ನಿಕಟಪೂರ್ವ ಅಧ್ಯಕ್ಷ ಎನ್.ಎಲ್. ಪುಣ್ಯಮೂರ್ತಿ, ಮೂಡಿಗೆರೆ ಸೀನಿಯರ್ ಛೇಂಬರ್ ಅಧ್ಯಕ್ಷ ಬಿ. ಬಸವರಾಜು, ಕಾರ್ಯದರ್ಶಿ ಹೆಚ್.ಆರ್. ಪ್ರದೀಪ್ ಕುಮಾರ್ ದುಂಡುಗ, ಕೋಶಾಧ್ಯಕ್ಷ ಬಿ.ಎನ್. ಮನಮೋಹನ್ ಹಾಗೂ ಸೀನಿಯರ್ ಛೇಂಬರ್ ಮೂಡಿಗೆರೆ ಹಾಗೂ ಜೇಸಿಐ ಮೂಡಿಗೆರೆ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ