IMG_20241220_174231

 

 

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರನ್ನು ಕಾಂಗ್ರೆಸ್ ಸರ್ಕಾರ ಬಂಧಿಸಿರುವುದು ಖಂಡನೀಯ ಎಂದು ಬಣಕಲ್ ಬಿಜೆಪಿ ಹೋಬಳಿ ಘಟಕದ ಅಧ್ಯಕ್ಷ ಕೆ.ಕೆ.ಯತೀಶ್ ಆರೋಪಿಸಿದರು.

ಅವರು ಶುಕ್ರವಾರ ಕೊಟ್ಟಿಗೆಹಾರ ವೃತ್ತದಲ್ಲಿ ಬಿಜೆಪಿ ವತಿಯಿಂದ  ಮಾನವ ಸರಪಳಿ ನಿರ್ಮಿಸಿ  ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಿ.ಟಿ.ರವಿಯವರಿಗೆ ನೋಟೀಸ್ ನೀಡದೇ ಬಂಧಿಸಿರುವ ಪೊಲೀಸರ ಕ್ರಮ ಖಂಡನೀಯವಾಗಿದೆ.ಅದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ’ಎಂದರು.

ಮುಖಂಡ ಬಿ.ಎಂ.ಭರತ್ ಮಾತನಾಡಿ ‘ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್ ಸದಸ್ಯರನ್ನು ಹೀನಾಯವಾಗಿ ನಡೆಸಿಕೊಂಡು ಅವರನ್ನು ಬಂಧಿಸಿದ್ದಾರೆ. ಎಲ್ಲಾ ಧರ್ಮದವರು ಸಹಬಾಳ್ವೆಯಿಂದ ಬದುಕುತ್ತಿದ್ದು ಕಾಂಗ್ರೆಸ್ ಸರ್ಕಾರ ಧರ್ಮಗಳ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ. 4ಜಿಲ್ಲೆಗಳನ್ನು ಸುತ್ತಾಡಿಸಿ ನಿದ್ದೆಯೂ ಮಾಡಲು ಬಿಡದೇ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ. ಇಂತಹ ದುಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು’ಎಂದರು.

ಸಂಘಟನಾ ಕಾರ್ಯದರ್ಶಿ ಚಿರಾಗ್ ಕೊಟ್ರಕೆರೆ ಮಾತನಾಡಿ’ ಕಾಂಗ್ರೆಸ್ ಹಗರಣಗಳನ್ನು ಮುಚ್ಚಿ ಹಾಕಲು ಸಿ.ಟಿ.ರವಿ ಅವರನ್ನು ಟಾರ್ಗೇಟ್ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ತುಘಲಕ್ ನೀತಿ ಅನುಸರಿಸುತ್ತಿದೆ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಬರುತ್ತೆ ಅನ್ನೊದನ್ನು ಎಲ್ಲಾ ಅಧಿಕಾರಿಗಳು ಮನಗಾಣಬೇಕು. ಮುಂದೆ ಬಿಜೆಪಿ ಸರ್ಕಾರವೂ ಅಧಿಕಾರಕ್ಕೆ ಬರುತ್ತದೆ. ಇಂತಹ ಕೆಟ್ಟ ಸರ್ಕಾರದ ನೀತಿಯನ್ನು ನಾವು ಖಂಡಿಸಬೇಕಿದೆ’ ಎಂದರು.

ಈ ಸಂದರ್ಭದಲ್ಲಿ  ಬೂತ್ ಅಧ್ಯಕ್ಷರಾದ ಸಾಗರ್ ತರುವೆ, ಮುಖಂಡರಾದ ಸಂಜಯ್ ಗೌಡ,ಬಿ.ಬಿ.ಮಂಜುನಾಥ್, ಎ.ಆರ್.ಅಭಿಲಾಷ್,ರಮೇಶ್ ಗುಡ್ಡಹಟ್ಟಿ,ಸ್ವರೂಪ್ ಕಬ್ಬಿಣಸೇತುವೆ,ಎ.ಎಸ್.ಅಶ್ವತ್ಥ್,ಅಭಿ ಜಾವಳಿ, ಕಾರ್ತಿಕ್,ಟಿ.ಎಂ.ನರೇಂದ್ರ,ಕೃಷ್ಣಮೂರ್ತಿ,ಶರತ್ ಫಲ್ಗುಣಿ,ಮನೋಜ್,ಅಂಜನ್, ಸಾಗರ್ ಹುಲ್ಲೇಮನೆ,ಅರುಣ್ ಪೂಜಾರಿ, ವಸಂತ ಶೆಟ್ಟಿ,ದೇವೇಂದ್ರ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ