Nelamangala 6

 

 

ಬೆಂಗಳೂರು ಸಮೀಪದ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಕಾರ್‌ನ ಮೇಲೆ ಕಂಟೇನರ್‌ ಲಾರಿ ಬಿದ್ದಿದ್ದರಿಂದ ಕಾರ್‌ನಲ್ಲಿದ್ದ 6 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೆಂಗಳೂರು ತುಮಕೂರು ನಡುವೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ಘಟನೆ ನಡೆದಿದೆ.  ಕಂಟೇನರ್‌ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಅದರೊಳಗಿದ್ದ ಎಲ್ಲಾ ಪ್ರಯಾಣಿಕರ ದೇಹಗಳು ಛಿದ್ರಛಿದ್ರವಾಗಿದೆ. ಡಿಕ್ಕಿ ರಭಸಕ್ಕೆ ಪಲ್ಟಿಯಾಗಿ ಕಾರಿನ ಮೇಲೆ ಕಂಟೇನರ್‌ ಬಿದ್ದಿದ್ದರಿಂದ ಒಂದೇ ಕುಟುಂಬದ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಡಿವೈಡರ್ ದಾಟಿ ಪಕ್ಕದ ರಸ್ತೆಗೆ ಬಂದು ಎದುರಿನಿಂದ ಬರುತ್ತಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಅಲ್ಲೇ ಅಪ್ಪಚ್ಚಿಯಾಗಿದ್ದಾರೆ.

KA 01 ND 1536 ವೋಲ್ವೋ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಜನರ ಗುರುತು ಪತ್ತೆ ಮಾಡಲಾಗಿದೆ. ಮೃತರು ಮಹಾರಾಷ್ಟ್ರ ಮೂಲದ ಬೆಂಗಳೂರು ನಿವಾಸಿಗಳಾಗಿದ್ದ ಪತಿ ಚಂದ್ರಮ್​ ಏಗಪ್ಪಗೋಳ್(46), ಪತ್ನಿ ಧೋರಾಬಾಯಿ(40), ಪುತ್ರ ಗ್ಯಾನ್‌(16), ಪುತ್ರಿಯರಾದ ದೀಕ್ಷಾ(10), ಆರ್ಯ(6) ಚಂದ್ರಮ್​ ಏಗಪ್ಪಗೋಳ್ ಸಹೋದರನ ಪತ್ನಿ ವಿಜಯಲಕ್ಷ್ಮೀ(35) ಮೃತ ದುರ್ವೈವಿಗಳು.ಇವರು ಕುಟುಂಬ ಸಮೇತ ವೀಕೆಂಡ್‌ ಪ್ರವಾಸಕ್ಕೆ ಹೊರಟಿದ್ದರು ಎನ್ನಲಾಗಿದೆ.

50 ಜನರಿಗೆ ಉದ್ಯೋಗ ನೀಡಿದ್ದ ಉದ್ಯಮಿ

ಚಂದ್ರಮ್​ ಏಗಪ್ಪಗೋಳ್ ಬೆಂಗಳೂರಿನಲ್ಲಿ ಕಂಪನಿ ಮಾಲೀಕ. ಸುಮಾರು 50 ಕ್ಕೂ ಹೆಚ್ಚು ಮಂದಿಗೆ ಕೆಲಸ ನೀಡಿದ್ದ ಉದ್ಯಮಿ. ಹೆಚ್‌ಎಸ್‌ಆರ್ ಲೇಔಟ್ ಬಳಿಯಿರುವ ಐಎಎಸ್‌ಟಿ ಸಾಫ್ಟ್‌ವೇರ್‌ ಸಲ್ಯೂಷನ್ಸ್‌ನಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 2018 ರಲ್ಲಿ ಕಂಪನಿ ಶುರುವಾಗಿತ್ತು. ಅದಕ್ಕೆ ಚಂದ್ರಮ್ ಅವರೆ ಎಂಡಿ, ಸಿಇಒ ಆಗಿದ್ದರು.

ಅಪಘಾತದಲ್ಲಿ ಚಂದ್ರಮ್ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ಮೃತಪಟ್ಟ ಸುದ್ದಿ ಕೇಳಿ ಕಂಪನಿ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ದುಃಖದಿಂದ ಅರ್ಧಕ್ಕೆ ಕೆಲಸ ನಿಲ್ಲಿಸಿ ಹೊರಟು ಹೋಗಿದ್ದಾರೆ. ಮಾಲೀಕನ ಸಾವಿನಿಂದ ಸಿಬ್ಬಂದಿ ದಿಗ್ಭ್ರಾಂತರಾಗಿದ್ದಾರೆ.

ಕಂಟೈನರ್ ಚಾಲಕ ಹೇಳೋದೇನು ?

ನನ್ನ ಮುಂದಿದ್ದ ಕಾರಿನಲ್ಲಿದ್ದವರನ್ನು ಬಚಾವ್‌ ಮಾಡಲು ಹೋಗಿ ಹೀಗಾಯ್ತು ಎಂದು   ಅಪಘಾತದ ಬಗ್ಗೆ ಕಂಟೈನರ್ ಲಾರಿ ಚಾಲಕ ಆರೀಫ್ ಹೇಳಿದ್ದಾರೆ.

ಆರಿಫ್‌ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಡಾಬಸ್‌ಪೇಟೆಯಿಂದ ಬೆಂಗಳೂರಿನ ಕಡೆಗೆ ನಾನು ಬರುತ್ತಿದ್ದೆ. ನನ್ನ ಮುಂದಿನ ಕಾರನ್ನು ಸೇಫ್ ಮಾಡಲು ಹೋಗಿ ಹೀಗೆ ಆಗಿದೆ. ಲಾರಿ ಡಿವೈಡರ್ ದಾಟಿ ಮುಂದಿನ ರಸ್ತೆಗೆ ಪಲ್ಟಿ ಆಯ್ತು. ನನ್ನ ಮುಂದಿನ ಕಾರಿನಿಂದಾಗಿ ಹೀಗೆ ಆಯ್ತು. ನನಗೆ ತುಂಬಾ ನೋವಾಗ್ತಿದೆ. ಅಲ್ಲಿ ಏನಾಯ್ತು ಆಮೇಲೆ ಅನ್ನೋದು ಗೊತ್ತಿಲ್ಲ. ಕಾರಿನ ಮೇಲೆ ನನ್ನ ಲಾರಿ ಪಲ್ಟಿಯಾಗಿತ್ತು ಎಂದು ಬೇಸರದಲ್ಲಿ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ