ಮೂಡಿಗೆರೆ ತಾಲ್ಲೂಕು ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಸ್. ನಾಗರಾಜು ಬಾಳೆಹಳ್ಳಿ ಮತ್ತು ಉಪಾಧ್ಯಕ್ಷರಾಗಿ ಎಂ.ಎಸ್.ಪ್ರಸನ್ನ ಮುಗ್ರಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿ.ಎಸ್. ನಾಗರಾಜು ಅಧ್ಯಕ್ಷರಾಗಿ ಹಾಗೂ ಎಂ.ಎಸ್. ಪ್ರಸನ್ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದಿನೆ ಸಲ್ಲಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ; ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೆ, ರೈತಾಪಿ ವರ್ಗದವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಸಹಕಾರ ಕ್ಷೇತ್ರದಲ್ಲಿ ಪರಸ್ಪರ ನಂಬಿಕೆ, ಪ್ರಾಮಾಣಿಕತೆ ಮುಖ್ಯವಾಗಿದ್ದು, ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಗ್ರಾಹಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಸಂಘದ ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ. ದಿವಾಕರ್, ಮುಖಂಡರಾದ ದೀಪಕ್ ದೊಡ್ಡಯ್ಯ, ರಂಜನ್ ಅಜಿತ್ ಕುಮಾರ್, ವಿ.ಕೆ. ಶಿವೇಗೌಡ, ಕೇಶವ್ ಕೆಂಜಿಗೆ, ಟಿ.ಎಂ. ಗಜೇಂದ್ರ, ಎಂ.ವಿ. ಜಗದೀಶ್, ಓ.ಜಿ. ರವಿ, ಬಿ.ಎನ್. ಜಯಂತ್, ಬಿ.ಎಂ. ಬೈರೇಗೌಡ, ಎಸ್.ಪಿ. ಸಚಿನ್ , ಬಿ.ಸಿ.ದಯಾಕರ್, ಸತೀಶ್ ಹಳೇಕೋಟೆ, ಮಹೇಶ್ ಮುಗ್ರಹಳ್ಳಿ, ಪ್ರಶಾಂತ್ ಬಿದರಹಳ್ಳಿ, ಬಿ.ಡಿ. ರಾಧಾಕೃಷ್ಣ ಬಿದರಹಳ್ಳಿ, ಧನಿಕ್ ಕೋಡದಿಣ್ಣೆ, ಪ್ರಶಾಂತ್ ಬಿಳಗುಳ, ರಕ್ಷಿತ್ ಬಡವನದಿಣ್ಣೆ ಮುಂತಾದವರು ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ಸಂಘದ ನಿರ್ದೇಶಕರುಗಳಾದ ಬಿ.ಟಿ.ಶ್ರೀನಾಥ್ ಬಿದರಹಳ್ಳಿ, ವಿನಯ್ ಹಳೇಕೋಟೆ, ಬಿ.ಆರ್. ವಿನಯ್ ಬಿದರಹಳ್ಳಿ, ಹೆಚ್.ವಿ. ರಾಘವೇಂದ್ರ ಹಳೇಕೋಟೆ, ಬಿ.ಸಿ. ದಿನೇಶ್ ಬಾಳೆಹಳ್ಳಿ, ಕೆ.ಜಿ. ದೀಪ್ತಿ ರಾಧಾಕೃಷ್ಣ ಬಿದರಹಳ್ಳಿ, ಬಿ.ಎಸ್. ಸಾವಿತ್ರಿ ಬಾಳೆಹಳ್ಳಿ, ಕೆ. ಮಹಮ್ಮದ್ ಜಮೀರ ಬಿದರಹಳ್ಳಿ, ಬಿ.ಪಿ. ರಂಗನಾಥ್ ಬಿದರಹಳ್ಳಿ, ರಮೇಶ ಹಳೇಕೋಟೆ. ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕರು ನಿತಿನ್ ಪಟೇಲ್, ಸಂಘದ ಸಿಇಓ ಚಂದ್ರಶೇಖರ್, ವಿವಿಧ ಪಕ್ಷಗಳ ಮುಖಂಡರು, ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರುಗಳು, ಬಿದರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರುಗಳು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ಬಿ.ಎಸ್. ನಾಗರಾಜು ಅವರು ಇದೇ ಮೊದಲ ಬಾರಿಗೆ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಮೊದಲ ಬಾರಿಗೆ ಅಧ್ಯಕ್ಷ ಪದವಿ ಗಳಿಸಿಕೊಂಡಿದ್ದಾರೆ. ಇವರು ಈ ಹಿಂದೆ ಬಿದರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಜಕೀಯವಾಗಿ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಸನ್ನ ಮುಗ್ರಹಳ್ಳಿ ಅವರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.



