ಇತ್ತೀಚೆಗೆ ನಿಧನರಾದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಾ ಅವರಿಗೆ ಮೂಡಿಗೆರೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೂಡಿಗೆರೆ ಜೇಸಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಜೇಸಿಐ, ಲಯನ್ಸ್, ರೋಟರಿ, ಬೆಳೆಗಾರರ ಸಂಘ, ರೈತಸಂಘ, ಒಕ್ಕಲಿಗರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಸಹಯೋಗದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ವಹಿಸಿದ್ದರು. ಈ ಸಂದರ್ಭದಲ್ಲಿ ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ, ಬಿ.ಜೆ.ಪಿ. ಮುಖಂಡ ದೀಪಕ್ ದೊಡ್ಡಯ್ಯ, ಲಯನ್ಸ್ ಅಧ್ಯಕ್ಷ ಜಯಕುಮಾರ್, ರೋಟರಿ ಅಧ್ಯಕ್ಷ ನರೇಂದ್ರ ಶೆಟ್ಟಿ, ಜೇಸಿಐ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನವೀನ್, ಮುಖಂಡರಾದ ಹಳಸೆ ಶಿವಣ್ಣ, ಜಿ.ಹೆಚ್. ಹಾಲಪ್ಪಗೌಡ, ಬಿ.ಕೆ. ಲಕ್ಷ್ಮಣಕುಮಾರ್, ಪ್ರದೀಪ್ ಮುಗ್ರಹಳ್ಳಿ, ಮೋಹಿಯುದ್ದೀನ್, ಪ್ರದೀನ್, ಪ್ರಸನ್ನ ಗೌಡಹಳ್ಳಿ, ಸಾಹಿತ್ಯ ಪರಿಷತ್ತಿನ ರವಿ ಕುನ್ನಹಳ್ಳಿ, ಎಂ.ಎಸ್. ನಾಗರಾಜು, ಲೋಕೇಶ್ ಮುಂತಾದವರು ಶ್ರದ್ಧಾಂಜಲಿ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ರೈತ ಮುಖಂಡ ಡಿ.ಆರ್.ಪುಟ್ಟಸ್ವಾಮಿಗೌಡ, ಕೃಷಿಕ ಸಮಾಜದ ಪಿ.ಕೆ. ನಾಗೇಶ್, ಲಯನ್ಸ್ ಮಾಜಿ ಅಧ್ಯಕ್ಷ ಹೆಚ್.ಸಿ. ಚಂದ್ರಕಾಂತ್, ಕೆ.ಟಿ.ದೇವಪ್ಪ, ಹಿರಿಯ ಮುಖಂಡ ಯು.ಎನ್. ಚಂದ್ರೇಗೌಡ, ರೇವಣ್ಣಗೌಡ, ಶಿವಕುಮಾರ್ ಹಳಿಕೆ, ಯು.ಇ. ಪ್ರಭಾಕರ್, ಬಿ.ಎಲ್. ದಿನೇಶ್, ಉದಯ್ ಕುಮಾರ್, ಕೆ.ಪಿ. ಸುಂದ್ರೇಶ್, ಹರ್ಷ ಹಳೇಕೋಟೆ, ಪವಿತ್ರಾ ಹಳೇಕೋಟೆ, ಆರ್. ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ಎಸ್.ಎಂ. ಕೃಷ್ಣ ಅವರ ದೂರದೃಷ್ಟಿ, ಶಾಂತ ಸ್ವಭಾವ, ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.



