hoge11

 

 

ಮೂಡಿಗೆರೆ ಮುನ್ಸಿಪಾಲಿಟಿಯ ಬೇಜವಾಬ್ದಾರಿ ವರ್ತನೆಯಿಂದ ಪಟ್ಟಣದ ಜನತೆ ವಿಷಗಾಳಿ ಸೇವಿಸುವ ಶಿಕ್ಷೆ ಅನುಭವಿಸುತ್ತಿದ್ದಾರೆ. ಮೂಡಿಗೆರೆ ಪಟ್ಟಣದ ಗೆಂಡೇಹಳ್ಳಿ ರಸ್ತೆಯ ಪಕ್ಕದಲ್ಲಿ ಹಾಕಿರುವ ಕಸದ ರಾಶಿಗೆ ಬೆಂಕಿ ಹಾಕಿದ್ದು, ಅದರಿಂದ ಹೊರಸೂಸುತ್ತಿರುವ ದಟ್ಟ ಹೊಗೆ ಪಟ್ಟಣದ ಜನರನ್ನು ಉಸಿರುಗಟ್ಟಿಸುತ್ತಿದೆ.

ಇದುವರೆಗೂ ಕೊಳೆತು ನಾರುತ್ತಿರುವ ಕಸದ ವಾಸನೆಯ ಹಿಂಸೆ ಅನುಭವಿಸುತ್ತಿದ್ದ ಜನರು ಈಗ ಆ ಕಸದ ರಾಶಿಗೆ ಹಾಕಿರುವ ಬೆಂಕಿಯಿಂದ ಮೇಲೆಳುತ್ತಿರುವ ದಟ್ಟ ಹೊಗೆಯನ್ನು ಕುಡಿಯಬೇಕಾದ ಯಾತನೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಬೇಲೂರು ಗೆಂಡೇಹಳ್ಳಿ ರಸ್ತೆಗೆ ಹೊಂದಿಕೊಂಡಂತೆ ಇರುವ ಬಹುತೇಕ ನಿವಾಸಿಗಳು ಕಳೆದ ಎರಡ್ಮೂ ರು ದಿನಗಳಿಂದ ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಮುಖ್ಯ ರಸ್ತೆಯಲ್ಲಿಯೇ ಕಸದ ರಾಶಿ ಹಾಕುತ್ತಿದ್ದು, ಇದರ ಬಗ್ಗೆ ದರ್ಪಣ ನ್ಯೂಸ್ ಹಲವು ಬಾರಿ ಸುದ್ದಿ ಮಾಡಿತ್ತು. ಸುದ್ದಿ ಮಾಡಿದಾಗ ಕಸವನ್ನು ಎತ್ತಿ ಸ್ವಚ್ಚಗೊಳಿಸಲಾಗುತ್ತದೆ. ಮತ್ತೆ ಕೆಲ ದಿನಗಳಲ್ಲಿ ಕಸ ಹಾಗೆಯೇ ರಾಶಿಯಾಗುತ್ತಿದೆ. ಇದರ ಬಗ್ಗೆ ಪಟ್ಟಣ ಪಂಚಾಯಿತಿ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ.

ರಾಶಿಯಾಗಿರುವ ಕಸವನ್ನು ಬೇರೆಡೆಗೆ ಸಾಗಿಸುವ ಬದಲು ಅಲ್ಲಿಯೇ ಅದಕ್ಕೆ ಬೆಂಕಿ ಹಾಕಲಾಗಿದೆ. ಇದರಿಂದ ಕೊಳೆಯು ನಾರುತ್ತಿರುವ ಕಸ, ಪ್ಲಾಸ್ಟಿಕ್ ಮುಂತಾದ ತ್ಯಾಜಗಳು ಸುಟ್ಟು ಅಸಾಧ್ಯ ಕೆಟ್ಟ ವಾಸನೆಯ ಹೊಗೆ ಮೇಲೇಳುತ್ತಿದೆ. ಇದನ್ನು ಸಹಿಸಿಕೊಳ್ಳಲು ಆಗದೇ ಪಟ್ಟಣದ ನಿವಾಸಿಗಳು ಪರದಾಡುತ್ತಿದ್ದಾರೆ. ಈಗಾಗಲೇ ಅಸ್ತಮಾ ಸೇರಿದಂತೆ ಉಸಿರಾಟದ ತೊಂದರೆ ಇರುವ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ಬಗ್ಗೆ ನಾಗರೀಕರು ಪಟ್ಟಣ ಪಂಚಾಯಿತಿ ಆಡಳಿತ ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಮೂರು ದಿನವಾದರೂ ಈ ಬೆಂಕಿಯನ್ನು ನಂದಿಸುವುದಾಗಲಿ, ಕಸವನ್ನು ಬೇರೆಡೆಗೆ ಸ್ಥಳಾಂತರಿಸುವುದಾಗಲಿ ಮಾಡಿಲ್ಲ.

ಕಸವನ್ನು ವಿಲೇವಾರಿ ಮಾಡಿ ಜನರು ಎದುರಿಸುತ್ತಿರುವ ಕಸವನ್ನು ತಕ್ಷಣ ಸ್ಥಳಾಂತರಿಸದಿದ್ದರೆ ಆ ಕಸವನ್ನು ತಂಡು ಪಟ್ಟಣ ಪಂಚಾಯಿತಿ ಕಛೇರಿ ಎದುರು ಸುರಿಯುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ