ಗುರುವಾರ ಚಿಕ್ಕಮಗಳೂರಿನ ಕೆನರಾ ಬ್ಯಾಂಕ್ ವಲಯ ಕಛೇರಿಯಲ್ಲಿ ಕಾಫಿ ಬೆಳೆಗಾರರ ಸುಸ್ತಿ ಸಾಲಕ್ಕೆ ಸಂಬಂಧಿಸಿದಂತೆ ಓಟಿಎಸ್ (ಒನ್ ಟೈಮ್ ಸೆಟ್ಲ್ ಮೆಂಟ್) ಅವಕಾಶ ನೀಡಲು ವಿಶೇಷ ಅದಾಲತ್ ನಡೆಸಲಾಯಿತು.
ಈ ಸಂದರ್ಭದಲ್ಲಿ ನೂರಾರು ಸುಸ್ತಿ ಸಾಲಗಾರರು ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಓಟಿಎಸ್ ಸೌಲಭ್ಯದಡಿ ಸಾಲ ಮರುಪಾವತಿ ಮಾಡಲು ಒಡಂಬಡಿಕೆ ಮಾಡಿಕೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷರಾದ ಎಂ ಜೆ ದಿನೇಶ್, ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಬಾಳೂರು ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಬೆಳೆಗಾರರ ಸಮಸ್ಯೆಗಳನ್ನು ವಿವರಿಸಿದರು ಮತ್ತು ಬೆಳೆಗಾರರು ಕೆನರಾ ಬ್ಯಾಂಕ್ ನೀಡಿರುವ OTS ಸವಲತ್ತನ್ನು ಬಳಸಿಕೊಂಡು ಋಣಮುಕ್ತ ರಾಗುವಂತೆ ಕರೆ ನೀಡಿರುತ್ತಾರೆ. ಹಾಸನ ಹಾಗೂ ಕೊಡಗಿನ ಕೆನರಾ ಬ್ಯಾಂಕ್ ಕಛೇರಿಗಳಲ್ಲೂ ಬೆಳೆಗಾರರು ಈ ಸವಲತ್ತನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಬಿ.ಆರ್. ಬಾಲಕೃಷ್ಣ ಸರ್ಫೇಸಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಮೂಡಿಗೆರೆ ತಾ ಬೆಳೆಗಾರರ ಸಂಘದ ಜೊತೆ ಕೈ ಜೋಡಿಸಿದ ಎಲ್ಲ ಮಹನೀಯರಿಗೂ ಧನ್ಯವಾದಗಳನ್ನ ತಿಳಿಸಿರುತ್ತಾರೆ. ಬೆಳೆಗಾರರ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಿದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ವಿಶೇಷವಾದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಹಾಗೆಯೇ ಹಾಸನ ಹಾಗೂ ಕೊಡಗಿನ ಎಲ್ಲ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳಿಗೆ, ಶಾಸಕರಾದ ಹೆಚ್.ಡಿ. ತಮ್ಮಯ್ಯನವರಿಗೆ, ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ರವರಿಗೆ, ಪರಿಷತ್ ಸದಸ್ಯ ರಾದ ಸಿ.ಟಿ ರವಿ ಯವರಿಗೆ ಮುಖಂಡರಾದ ದೀಪಕ್ ದೊಡ್ಡಯ್ಯನವರಿಗೆ ಮೂಡಿಗೆರೆ ಬೆಳೆಗಾರರ ಸಂಘದಿಂದ ಸಮಸ್ತ ಬೆಳೆಗಾರರ ಪರವಾಗಿ ಕೃತಜ್ಞತೆಗಳನ್ನ ಸಲ್ಲಿಸಿದ್ದಾರೆ.



