drone prathyaxike

 

 

ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಕಾರಣ ರೈತರು ಕೃಷಿಯನ್ನು ಕೈಬಿಡುವ ಹಂತಕ್ಕೆ ತಲುಪಿದ್ದಾರೆ. ಹೀಗೆಯೆ ಮುಂದುವರೆದರೆ ಮುಂದೆ ಬಾರಿ ಸಮಸ್ಯೆ ಎದುರಿಸಬೇಕಾಗುತ್ತದೆ. ಕಾರ್ಮಿಕರ ಕೊರತೆಯನ್ನು ನೀಗಿಸುವ ಸಲುವಾಗಿ ಯಂತ್ರಗಳು ಮಾರುಕಟ್ಟೆಯನ್ನು ಪ್ರವೇಶಿಸಿದೆ ರೈತರು ಮತ್ತು ಕಾಫಿ ಬೆಳೆಗಾರರು ಇದರ ಸದುಪಯೋಗ ಪಡೆಸಿಕೊಳ್ಳುವುದರೊಂದಿಗೆ ಕೃಷಿಯನ್ನು ಸಂಮೃದ್ದವಾಗಿ ಬೆಳೆಸಲು ಮುಂದಾಗಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕಾ ಮೇಳ 2 ದಿನದ ಕಾರ್ಯಗಾರದಲ್ಲಿ ಶನಿವಾರ ಮಾತನಾಡಿ, ಡ್ರೋಣ್ ಮೂಲಕ ತೋಟಗಳಿಗೆ ರಾಸಾಯನಿಕ ಸಿಂಪಡಣೆ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿ, ಡ್ರೋಣ್ ತೆಂಗು, ಅಡಿಕೆ, ಕಾಳು ಮೆಣಸಿನ ಬಳ್ಳಿ ಹಬ್ಬಿರುವ ಮರಕ್ಕೆ ಸೇರಿದಂತೆ ವಿವಿದ ಕೃಷಿಗಳಿಗೆ ಸರಗವಾಗಿ ಔಷಧಿ ಸಿಂಪಡಿಸುತ್ತದೆ. ಒಂದು ಗಂಟೆಗೆ 5 ಎಕರೆ ಜಾಗದಲ್ಲಿ ಸಿಂಪಡಣೆ ಮಾಡುವ ಸಾರ್ಮಥ್ಯವನ್ನು ಹೊಂದಿದೆ ಹತ್ತಾರು ಕಾರ್ಮಿಕರು ಮಾಡುವ ಕೆಲವನ್ನು ಡ್ರೋಣ್ ಮೂಲಕ ಮಾಡಲು ಸಾಧ್ಯವಿದೆ ಎನ್ನುವುದನ್ನು ಸಾಭಿತು ಪಡಿಸುತ್ತಿದೆ. ಕೃಷಿಕರು ತಮ್ಮ ಜಮೀನಿನಲ್ಲಿ ನಡೆಯುವ ಕೃಷಿ ಚಟುವಟಿಕೆಗಳಿಗೆ ಯಾಂತ್ರಿಕರಣ ಬಳಸಿ ಹೆಚ್ಚು ಲಾಭಗಳಿಸುವಂತೆ ತಿಳಿಸಿದರು. ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಬೆಳೆಗಳ ಬಗ್ಗೆ ಉತ್ತಮ ಮಾಹಿತಿಯನ್ನು ನೀಡುವುದರೊಂದಿಗೆ ಇಳುವರಿಯನ್ನು ಹೆಚ್ಚಿಸಲು ರೈತರಿಗೆ ತರಬೇತಿ ನೀಡುತ್ತಿರುವುದು ವಿಜ್ಞಾನಿಗಳ ಮತ್ತು ರೈತರ ನಡುವಿನ ಭಾಂಧವ್ಯಕ್ಕೆ ಸಾಕ್ಷಿಯನ್ನು ನೀಡುತ್ತದೆ ಎಂದು ತಿಳಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ.ಮೋಹನ್ ಕುಮಾರ್ ಮಾತನಾಡಿ ಕೆವಿಕೆ ವಿಜ್ಞಾನಿಗಳು ಏನು ಸಂಶೋಧನೆ ಮಾಡುತ್ತಾರೆ ಅದನ್ನು ರೈತರು ಕ್ರಮವಾಗಿ ವಿಜ್ಞಾನಿಗಳ ಸಲಹೆಯಂತೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದರೆ ಹೆಚ್ಚಿನ ಆಧಾಯ ಪಡೆಯಲುಸಾಧ್ಯವಿದೆ ಕಾರ್ಮಿಕರ ಕೊರತೆ ಕೃಷಿಕರಿಗೆ ಸವಾಲಾಗಿದೆ ಈಗಾಗಲೆ ವಿಜ್ಞಾನಿಗಳು ಬಹುತೇಕ ಯಾಂತ್ರಿಕೀಕರಣಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಸರ್ಕಾರದಿಂದ ಸಹಾಯಧನ ಕೂಡ ಸಿಗುತ್ತದೆ. ರೈತರು ಇದರ ಸದುಪಯೋಗಪಡಿಸಿಕೊಂಡಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ತೊಂದರೆಯಾಗದು ಎಂದು ತಿಳಿಸಿದರು.

ಬೆಂಗಳೂರಿನ ಪ್ರಧಾನ ಕೃಷಿ ವಿಜ್ಞಾನಿ ಡಾ.ಚಂದ್ರೇಗೌಡ ಮಾತನಾಡಿ ರೈತರಿಗಾಗಿ ಮಾಹಿತಿಯನ್ನು ಕೊಡುವ ಸಲುವಾಗಿ ಕೃಷಿ ಮತ್ತು ತೋಟಗಾರಿಕೆ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೇಳದಿಂದ ಹಲವು ರೈತರು ಮಾಹಿತಿಯನ್ನು ಪಡೆಯುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ರೈತರು ಕೃಷಿಯಿಂದ ದೂರ ಸರಿಯುವ ಆಲೋಚನೆ ಬೆಳೆಸಿಕೊಳ್ಳಬಾರದು. ರೈತರು ಸೈನಿಕರಿದ್ದಂತೆ ಕೃಷಿ ಚಟುವಟಿಕೆ ಹೋರಾಟವಿದ್ದಂತೆ ಆ ಹೋರಾಟದಲ್ಲಿ ಯಶಸ್ವಿಯಾಗುವುದು ಉತ್ತಮ ಇಳುವರಿಯ ಬೆಳೆ ಕೈ ಸೇರಿದಾಗ ಎಂದು ತಿಳಿದುಕೊಳ್ಳಬೇಕು ಹಾಗಾದರೆ ಮಾತ್ರ ಗುಣಮಟ್ಟದ ಬೆಳೆ, ಬೆಳೆಯಲು ಸಾಧ್ಯವಿದೆ ಎಂದು ತಿಳಿಸಿದರು.

ಕೆವಿಕೆ ಮುಖ್ಯಸ್ಥ ಡಾ.ಎ.ಟಿ.ಕೃಷ್ಣಮೂರ್ತಿ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರಾಧಿಕ್ಷಕಿ ಡಾ.ಸಿ.ಕೆ.ಪ್ರಮಿಳ, ಕಡೇಮಡ್ಕಲ್ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎ.ವಿ.ಸ್ವಾಮಿ, ಉದ್ಯಮಿ ಗಜೇಶ್ ಇತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ