27-mudigere-1

 

 

ಮನಮೋಹನ್ ಸಿಂಗ್ ಮೂಲತ: ಕೃಷಿ ವಿಷಯದಲ್ಲಿ ಅರ್ಥ ಶಾಸ್ತ್ರಜ್ಞರು, ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಭಾರತಕ್ಕೆ ಬಹಳ ಆರ್ಥಕತೆಯನ್ನು ತಂದು ಕೊಟ್ಟರು, ಭಾರತ ಬಹಳ ಸಂಕಷ್ಟದಲ್ಲಿದ್ದಾಗ ವಿದೇಶದಿಂದ ಪೆಟ್ರೋಲ್ ಡಿಸೇಲ್ ಅಮದು ಮಾಡಿಕೊಳ್ಳಲಾಗದ ಸಂಕಷ್ಟದಲ್ಲಿದ್ದಾಗ ಆಗ ಆರ್ಥಿಕ ಶಕ್ತಿಯನ್ನು ಕೊಟ್ಟವರೆಂದರೇ ತಪ್ಪಾಗಲಾರದು. ದೇಶದ ಆರ್ಥಿಕತೆಯಿಂದ ಜನಸಾಮಾನ್ಯರನ್ನು ಹೊರಕ್ಕೆ ತಂದವರು ಮನಮೋಹನ್ ಸಿಂಗ್ ಎಂದು ಕೆಳದಿ ಶಿವಪ್ಪ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ಕುಲಪತಿ ಆರ್.ಸಿ.ಜಗದೀಶ್ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ 2 ದಿನಗಳ ಕಾಲ ನಡೆಯುವ ಕೃಷಿ ಮತ್ತು ತೋಟಗಾರಿಕಾ ಮೇಳ-2024 ಕ್ಕೆ ಚಾಲನೇ ನೀಡಿ ಮಾತನಾಡಿದ ಅವರು. ಇಂದು ದೇಶಕಂಡ ಮಹಾನ್ ನಾಯಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಸಬೆಯನ್ನು ನಡೆಸಿ ಮಾತನಾಡಿದ ಅವರು. ಮನಮೋಹನ್ ಸಿಂಗ್ ಅವರು ಅಂದು ಮನಸ್ಸು ಮಾಡದೇ ಇದ್ದಿದ್ರೆ ಇಂದು ಕೃಷಿ ಅವನತಿಯ ಹಂತವನ್ನು ತಲುಪುತಿತ್ತು ಕಾರಣ ನಾವು ಬೆಳೆದ ವಸ್ತುವನ್ನು ಬೇರಡೆ ಮಾರಾಟ ಮಾಡಲಾಗದೆ ಸಂಕಷ್ಟದಲ್ಲಿ ಸಿಲುಕಿದಾಗ, ಕೃಷಿಯನ್ನು ಮುಕ್ತ ಮಾರುಕಟ್ಟೆ ಯನ್ನಾಗಿಸಿ ರೈತರ ಬದುಕಿಗೆ ಹಸನು ತಂದ ಮಹಾನ್ ವ್ಯಕ್ತಿ, ಕೃಷಿ ಪ್ರಧಾನ ಹೆಚ್ಚಿನ ಒತ್ತು ತಂದವರು ಮನಮೋಹನ್ ಸಿಂಗ್ ಎಂದರು.

ವೇದಿಕೆಯಲ್ಲಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜಿ.ದಿನೇಶ್, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಹಳಸೆ  ಶಿವಣ್ಣ, ಬಿ.ಎಸ್.ಜಯರಾಮ್, ಪಟ್ಟದೂರು ನಾಗೇಶ್, ಪೂರ್ಣೆಶ್ ಜಿ.ಹೊಸಳ್ಳಿ, ಡಿಒಇ ಡಾ.ಹೇಮ್ಲಾನಾಯಕ್, ಡಾ, ದುಷ್ಯಂತ್ ಕುಮಾರ್, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ವಿ.ಶ್ರೀನಿವಾಸ, ಕೆವಿಕೆ ಮುಖ್ಯಸ್ಥ ಡಾ.ಎ.ಟಿ. ಕೃಷ್ಣಮೂರ್ತಿ, ವ.ಕೃ.ತೋ.ಸಂ. ಕೇಂದ್ರದ ಹಿರಿಯ ಕ್ಷೇತ್ರಾಧಿಕ್ಷಕಿ ಡಾ. ಸಿ.ಕೆ.ಪ್ರಮಿಳ, ಕಡೇಮಡ್ಕಲ್ ಕೃ.ತೋ.ಸಂ. ಕೇಂದ್ರದ ಡಾ. ಎ.ವಿ.ಸ್ವಾಮಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಐ.ಸಿ.ಎ.ಆರ್-ಐ.ಐ.ಎಸ್.ಆರ್‍ನ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಎಂ.ಎನ್.ವೇಣುಗೋಪಾಲ್, ಮುಖ್ಯಸ್ಥ ಡಾ.ಎಸ್.ಜೆ.ಅಂಕೇಗೌಡ, ಶಿವಮೊಗ್ಗದ ಅಡಿಕೆ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕ ಡಾ.ನಾಗರಾಜಪ್ಪ ಅಡಿವಪ್ಪರ್, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಮಂಜುನಾಥ, ಮೂಡಿಗೆರೆಯ ವ.ಕೃ.ತೋ.ಸಂ.ಕೇಂದ್ರದ ಯೋಜನಾ ಮುಖ್ಯಸ್ಥ ಡಾ. ಎಂ.ವೈ.ಉಲ್ಲಾಸ, ತೋಟಗಾರಿಕೆ ಮಹಾವಿದ್ಯಾಲಯದ ಕೊಲ್ಲೋತ್ತರ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವೈ.ಕಾಂತರಾಜ್ ಅವರು ತಾಂತ್ರಿಕ ಹಾಗೂ ವಿವಿಧ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ