ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಪೂರ್ಣಗೊಂಡಿದೆ.
ಸಂಘದ ಒಟ್ಟು 25 ನಿರ್ದೇಶಕ ಸ್ಥಾನಗಳಲ್ಲಿ 18 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 7 ಸ್ಥಾನಗಳಿಗೆ ಡಿಸೆಂಬರ್ 28ರಂದು ಚುನಾವಣೆ ನಡೆದಿತ್ತು. ಇಂದು ಚುನಾವಣೆ ಮತ ಎಣಿಕೆ ನಡೆದಿದ್ದು, ಫಲಿತಾಂಶ ಪ್ರಕಟವಾಗಿದೆ.

ಮೂಡಿಗೆರೆ ತಾಲ್ಲೂಕಿನಿಂದ ಎಂ.ಎಸ್. ಪ್ರದೀಪ್ ಸತತ ಐದನೇ ಬಾರಿಗೇ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮಂಜುನಾಥ್ ಗೌಡ ಅವರಿಗಿಂತ 190 ಮತಗಳ ಅಂತರದಿಂದ ಗೆಲುವು ಪಡೆದು ಆಯ್ಕೆಯಾಗಿದ್ದಾರೆ.



ಚಿಕ್ಕಮಗಳೂರು ತಾಲ್ಲೂಕಿನಿಂದ 3 ಪುರಷ ಸ್ಥಾನಗಳಿಗೆ ಮತ್ತು 1 ಮಹಿಳಾ ಸ್ಥಾನಕ್ಕೆ ಚುನಾವಣೆ ನಡೆದಿದ್ದು. ಪುರುಷರಲ್ಲಿ ಹೊಯ್ಸಳಗೌಡ ಮಳಲೂರು 2025 ಮತಗಳು, ಮಂಜು ಚೇತನ್ ಇಂದಾವರ 1809 ಮತಗಳು ಮತ್ತು ರತೀಶ್ ಕುಮಾರ್ ಜಕ್ಕನಹಳ್ಳಿ 1618 ಮತಗಳನ್ನು ಗಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಮಹಿಳಾ ಕ್ಷೇತ್ರದಿಂದ ಭವ್ಯ ನಟೇಶ್ ಮಾಗರವಳ್ಳಿ ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 328 ಮತಗಳ ಅಂತರದಿಂದ ಗೆಲುವು ಪಡೆದು ಆಯ್ಕೆಯಾಗಿದ್ದಾರೆ.
ಕಳಸ ತಾಲೂಕಿನಿಂದ ಸಂತೋಷ್ ಹಿನಾರಿ ಅವರು ಕೆ.ಆರ್. ಪ್ರಭಾಕರ್ ಅವರ ವಿರುದ್ಧ ಕೇವಲ 2 ಮತಗಳ ಅಂತರದಿಂದ ಗೆಲುವು ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕಡೂರು ತಾಲ್ಲೂಕಿನಿಂದ ಉದಯ್ ಅವರು ಆಯ್ಕೆಯಾಗಿದ್ದಾರೆ.
ಈಗಾಗಲೇ 18 ಮಂದಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಬಿ.ಸಿ.ಲೋಕಪ್ಪಗೌಡ್ರು, ರಾಜಶೇಖರ್ ಟಿ.ಎಂ., ಟಿ.ಡಿ. ಮಲ್ಲೇಶ್, ಸಜೀತ್, ಅನಂತೇಗೌಡ, ಎಂ.ಬಿ. ಆನಂದ ( ಪಾಪಣ್ಣ), ಕೆ.ಪಿ. ರಾಜೇಂದ್ರ, ಮೋಹನ್ ಹಳಿಯೂರು, ಅಶೋಕ್ ಮಳ್ಳೂರು, ಶ್ರೀಮತಿ ಪವಿತ್ರಾ ರತೀಶ್ ಹಳೇಕೋಟೆ, ಶ್ರೀಮತಿ ಹರಿಣಾಕ್ಷಿ ನಾಗರಾಜು, ಯು.ಪಿ. ಮನುಕುಮಾರ್, ರಾಜು, ಪೃಥ್ವಿ, ನವೀನ್ ಶೃಂಗೇರಿ, ಶ್ರೀಮತಿ ಸಿ.ಟಿ ರೇವತಿ., ಉಮಾಶಂಕರ್ ತರೀಕೆರೆ ಅವರೋಧವಾಗಿ ಅಯ್ಕೆಯಾಗಿದ್ದಾರೆ.



