ಛಲವಾದಿ ಮಹಾಸಭಾ ಮೂಡಿಗೆರೆ ಇವರ ವತಿಯಿಂದ ಅಗಲಿದ ಉಪನ್ಯಾಸಕ ದಿ. ಎಂ.ಎಸ್.ಆಶೋಕರವರ ಎರಡನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಮೂಡಿಗೆರೆ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಲಾಮಕ್ಕಳಿಗೆ ನೊಟ್ ಬುಕ್ ವಿತರಿಸಲಾಯಿತು. ನಂತರ ಅವರ ಹುಟ್ಟೂರಾದ ಮಗ್ಗಲಮಕ್ಕಿಯಲ್ಲಿ ಮತ್ತು ಅವರು ಪ್ರಥಮವಾಗಿ ವಿದ್ಯಾಭ್ಯಾಸ ಮಾಡಿದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡಿ ; ಎಂ.ಎಸ್. ಅಶೋಕ್ ಅವರು ಅಪಾರವಾಗಿ ಸಾಮಾಜಿಕ ಕಾಳಜಿ ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರು ಸದಾ ಕ್ರಿಯಾಶೀಲರಾಗಿ ಹೊಸ ಹೊಸ ವಿಚಾರಗಳ ಬಗ್ಗೆ ಚಿಂತಿಸುತ್ತಿದ್ದರು. ಯುವಕರನ್ನು, ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದರು. ಮೂಡಿಗೆರೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ತಮ್ಮದೇ ಒಳನೋಟ ಹೊಂದಿದ್ದರು. ಅವರ ಅಕಾಲಿಕ ನಿಧನ ತುಂಬಲಾರದ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ಛಲವಾದಿ ಸಂಘದ ತಾಲೂಕು ಅಧ್ಯಕ್ಷರಾದ ಮಂಜುನಾಥ. ಜಿಲ್ಲಾ ಅದ್ಯಕ್ಷರಾದ ರಘು. ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ.ಆರ್. ಬಾಲಕೃಷ್ಣ. ಎಂ.ಎಸ್.ಅನಂತ್. ಕೆಂಬತ್ತಮಕ್ಕಿಮನೋಜ್. ಮಗ್ಗಲಮಕ್ಕಿಗಣೇಶ್. ಶಾಲೆಯ ಶಿಕ್ಷಕರಾದ ರಾಜೇಶ್. ಹೆಸಗಲ್ ಗೀರಿಶ್. ಬಕ್ಕಿಮಂಜು. ಹಾಲೂರುಸುಬ್ರಮಣ್ಯ. ಬೆಟ್ಟಗೆರೆಲೋಕೆಶ್. ಎಂ.ಎಸ್.ಆಶೋಕ್ ಅಭಿಮಾನಿಗಳು.ಶಿಕ್ಷಕರುಗಳು.ವಿದ್ಯಾರ್ಥಿಗಳು ಬಾಗವಹಿಸಿದ್ದರು. ಲೋಕೇಶ್ ಬೆಟ್ಟಗೆರೆ. ಮಂಜುನಾಥ್ ಲೋಕವಳ್ಳಿ. ಕೆಂಚಪ್ಪ, ಬೈರಪ್ಪ ಹ್ಯಾರಗುಡ್ಡೆ. ರಾಜೇಶ್ ಬಗ್ಗಸಗೋಡು. ಕುಮಾರ್ ಬಕ್ಕಿ, ರವಿ ಮಾಕೋನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.



