krishika 12

 

 

ಮೂಡಿಗೆರೆ ಕೃಷಿ ಸಮಾಜದ ನೂತನ ಅಧ್ಯಕ್ಷರಾಗಿ ಡಿ.ಎಲ್. ಅಶೋಕ್ ಕುಮಾರ್ ಬಾಳೆಗದ್ದೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಗಳವಾರ ಮೂಡಿಗೆರೆ ಕೃಷಿ ಇಲಾಖೆ ಆವರಣದಲ್ಲಿ ನಡೆದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಡಿ.ಎಲ್. ಅಶೋಕ್ ಕುಮಾರ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿ.ಎಲ್. ಅಶೋಕ್

 

ಪ್ರಧಾನ ಕಾರ್ಯದರ್ಶಿಯಾಗಿ ಬಿ.ಆರ್. ಯತೀಶ್ ಬೆಟ್ಟಗೆರೆ, ಉಪಾಧ್ಯಕ್ಷರಾಗಿ ಬಿ.ಸಿ. ಲಕ್ಷ್ಮಣಗೌಡ ಬಿಳ್ಳೂರು, ಖಜಾಂಚಿಯಾಗಿ ಹೆಚ್.ಬಿ. ಜಗನ್ನಾಥಗೌಡ ಯು.ಹೊಸಳ್ಳಿ, ಜಿಲ್ಲಾ ಪ್ರತಿನಿಧಿಯಾಗಿ ಪಿ.ಕೆ. ನಾಗೇಶ್ ಗೌಡ ಪಟ್ಟದೂರು ಅವಿರೋಧವಾಗಿ ಆಯ್ಕೆಯಾಗಿದ್ದರೆ.

ಈ ಸಂದರ್ಭದಲ್ಲಿ ಮೂಡಿಗೆರೆ ಕೃಷಿಕ ಸಮಾಜದ ನಿರ್ದೇಶಕರಾಗಿ ಕೆ. ಸತೀಶ್, ಹೆಚ್.ಕೆ. ಮನೋಜ್, ಹೆಚ್.ಕೆ. ಪೂರ್ಣೇಶ್, ಡಿ.ಇ. ಮದನ್ ಕುಮಾರ್, ಹೆಚ್.ಜಿ. ವೆಂಕಟೇಶ್, ಡಿ.ಆರ್. ಪುಟ್ಟಸ್ವಾಮಿಗೌಡ, ಬಿ.ಕೆ. ಚಂದ್ರಶೇಖರ್, ಎಂ.ಜಿ. ಭರತ್ ಕುಮಾರ್, ಎಂ.ಎಸ್. ಅಣ್ಣೇಗೌಡ, ಮೂಡಿಗೆರೆ ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

ಕೃಷಿಕ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಎಲ್. ಅಶೋಕ್ ಕುಮಾರ್ ಅವರು ಮೂಡಿಗೆರೆ ತಾಲ್ಲೂಕಿನ ಬಾಳೆಗದ್ದೆ ಗ್ರಾಮದವರಾಗಿದ್ದು, ತಾಲ್ಲೂಕಿನ ಪ್ರಮುಖ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಸತತ 13 ವರ್ಷಗಳ ಕಾಲ ಮೂಡಿಗೆರೆ ಕೃಷಿಕ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇದೀಗ ಮತ್ತೊಂದು ಅವಧಿಗೆ ಮೂಡಿಗೆರೆ ಕೃಷಿಕ ಸಮಾಜದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ ಮೂಡಿಗೆರೆ ಕೃಷಿಕ ಸಮಾಜದ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರುಗಳಿಗೆ, ಸಹಕಾರ ನೀಡಿದ ವಿವಿಧ ಪಕ್ಷಗಳ ಮುಖಂಡರಿಗೆ, ಕೃಷಿ ಇಲಾಖೆಯ ಅಧಿಕಾರಿಗಳಿಗೆ, ಸ್ನೇಹಿತರಿಗೆ, ತಾಲ್ಲೂಕಿನ ಸಮಸ್ತ ರೈತಬಾಂಧವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ