sundaresh

 

 

ಬಿ.ಕೆ.ಸುಂದರೇಶ್ ಅವರು ರಾಜ್ಯದ ಜನಪರ ಚಳುವಳಿಗೆ ಹೊಸ ಹುರುಪು ತಂದಿದ್ದರು, ವಿಶೇಷವಾಗಿ ಮಲೆನಾಡು ಭಾಗದಲ್ಲಿ ಅವರು ಜನಸಾಮಾನ್ಯರಿಗೆ ಹೊಸ ಧ್ವನಿಯಾಗಿದ್ದರು. ಅವರ ಅಕಾಲಿಕ ನಿಧನದಿಂದ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಯಿತು ಎಂದು ಸಕಲೇಶಪುರ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಹೇಳಿದರು.

ವಿಶ್ವನಾಥ್

ಅವರು ಮಂಗಳವಾರ ಮೂಡಿಗೆರೆ ಜೇಸಿ ಭವನದಲ್ಲಿ ಅವಿನ್ ಟಿವಿ, ಜೇಸಿಐ, ಸುಂದರೇಶ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ದಿವಂಗತ ಬಿ.ಕೆ. ಸುಂದರೇಶ್ ಅವರ ಮೂವತ್ತನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಮೂಡಿಗೆರೆ ತಾಲ್ಲೂಕಿನ ಬಕ್ಕಡಿ ಗ್ರಾಮದ ಭೂಮಾಲಿಕರ ಕುಟುಂಬದಲ್ಲಿ ಜನಿಸಿದ ಸುಂದರೇಶ್ ಶೋಷಿತರ ಧ್ವನಿಯಾಗಿ ಪರಿವರ್ತನೆ ಹೊಂದಿದ್ದು ಒಂದು ಸಾಹಸಗಾಥೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಾರ್ಮಿಕ ಮತ್ತು ರೈತ ಚಳುವಳಿ ಬಿ.ಕೆ. ಸುಂದರೇಶ್ ಆಗಮನದ ನಂತರ ನವಚೈತನ್ಯ ಪಡೆದುಕೊಂಡಿತು. ಅವರು ಶೋಷಿತರಿಗೆ ಹೊಸ ಭರವಸೆಯ ಬೆಳಗಾಗಿದ್ದರು. ಅನೇಕ ಚಳುವಳಿಗಳನ್ನು ಮುನ್ನಡೆಸಿದ್ದರು. ಜಾತ್ಯಾತೀತ ಮನೋಭಾವನೆ, ಸರಳ ಜೀವನ ಕ್ರಮಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಅವರು 1994ರ ಡಿಸೆಂಬರ್ 31ರಂದು ಅಂಗನವಾಡಿ ಕಾರ್ಯಕರ್ತರ ಸಮಾವೇಶವನ್ನು ಮುಗಿಸಿ ಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾಗ ಯಶವಂತಪುರ ಬಳಿ ರೈಲ್ವೇ ಅಪಘಾತದಲ್ಲಿ ಅಸುನೀಗಿದರು. ಅವರ ಅಕಾಲಿಕ ಸಾವು ಸಮಾಜಕ್ಕೆ ತುಂಬಲಾರದ ನಷ್ಟವಾಯಿತು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವೆ ಶ್ರೀಮತಿ ಮೋಟಮ್ಮ, ಕಾಂಗ್ರೇಸ್ ಮುಖಂಡರಾದ ಹೆಚ್.ಹೆಚ್. ದೇವರಾಜು, ಎಂ.ಎಲ್. ಮೂರ್ತಿ, ಬಿಎಸ್ಪಿ ಮುಖಂಡ ರಾಧಾಕೃಷ್ಣ ಮುಂತಾದವರು ಮಾತನಾಡಿದರು.

ಹಿರಿಯ ಬೆಳೆಗಾರ ಎಂ.ಬಿ. ಪ್ರಭಾಕರ್ ಮಾಕೋನಹಳ್ಳಿ, ಬೆಳೆಗಾರರ ಸಂಘದ ಬಿ.ಆರ್. ಬಾಲಕೃಷ್ಣ, ಬಿ.ಎಸ್. ಜಯರಾಂ, ರಾಧಾ ಸುಂದರೇಶ್, ಬಿ.ಕೆ. ಲಕ್ಷ್ಮಣಕುಮಾರ್, ರಮೇಶ್ ಕೆಳಗೂರು, ಡಿ.ಕೆ. ಲಕ್ಷ್ಮಣಗೌಡ, ಮನೋಜ್ ಕೆಂಬತ್ತಮಕ್ಕಿ, ಮಗ್ಗಲಮಕ್ಕಿ ಗಣೇಶ್, ನಾಗೇಶ್ ಮಡ್ಡೀಕೆರೆ, ಭರತ್ ಮಡ್ಡೀಕೆರೆ, ವಾಸುದೇವ್ ಸತ್ತಿಗನಹಳ್ಳಿ, ರಮೇಶ್ ಕೆರೆಮಕ್ಕಿ, ರಾಜು ಬನ್ನೂರು, ಬಿ.ರುದ್ರಯ್ಯ, ರಮೇಶ್ ಲೋಕವಳ್ಳಿ, ನಿಡುವಾಳೆ ಚಂದ್ರು, ಎಂ.ಸಿ. ನಾಗೇಶ್, ಬಕ್ಕಿ ಮಂಜು, ಚರಣ್, ಶಂಕರ್, ಪ್ರಭಾಕರ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ