kadur thasildar poornima

 

 

ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿದ ಆರೋಪದ ಮೇಲೆ ತಹಸಿಲ್ದಾರ್ ಒಬ್ಬರನ್ನು ಅಮಾನತು ಪಡಿಸಲಾಗಿದೆ.
ಭದ್ರಾವತಿ ವಿಭಾಗದ ಲಕ್ಕವಳ್ಳಿ ವಲಯದಲ್ಲಿನ ಅಧಿಸೂಚಿತ ಅರಣ್ಯ ಪ್ರದೇಶದ ರಂಗೇನಹಳ್ಳಿ ಗ್ರಾಮದ ಸರ್ವೆ ನಂ.4ರಲ್ಲಿ  ತರೀಕೆರೆ ತಹಶೀಲ್ದಾರ್‌ ಗಳಾಗಿ ಕರ್ತವ್ಯ ನಿರ್ವಹಿಸಿದ ಶ್ರೀಮತಿ ಸಿ.ಎಸ್‌. ಪೂರ್ಣಿಮ ಮತ್ತು ಧರ್ಮೋಜಿ ರಾವ್ ಒಟ್ಟು 12-33 ಎಕರೆ/ಗುಂಟೆ ಅರಣ್ಯ ಜಮೀನನ್ನು ಐದು ಜನರಿಗೆ ಅನಧಿಕೃತವಾಗಿ ಮಂಜೂರು ಮಾಡಿದ್ದರು.

ಉನ್ನಿನಾನ್ ಕುಟ್ಟಿ, ಶಿವಕುಮಾರ್ , ರಮೇಶ್ ,ನಂಜೇಗೌಡ, ಮುಡುಗೋಡು ಸ್ವಪ್ನ ಎಲ್.ಬಿ.ರಂಗೇನಹಳ್ಳಿ,ಕೃಷಪ್ಪ, ರಂಗೇನಹಳ್ಳಿ,ಎನ್. ಟಿ. ಇವರು ಫಲಾನುಭವಿಗಳಾಗಿದ್ದಾರೆ.

ಅರಣ್ಯ ಜಮೀನನ್ನು ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ಮಂಜೂರು ಮಾಡುವ ಅಧಿಕಾರ ಇಲ್ಲದಿದ್ದರೂ, ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಪೂರ್ಣಿಮಾ ರವರನ್ನು ಅಮಾನತುಪಡಿಸಲಾಗಿದೆ.

ಎನ್. ಟಿ. ಧರ್ಮೋಜಿರಾವ್, ಹಿಂದಿನ ತಹಶೀಲ್ದಾರ್, 31.10.2019 ರಲ್ಲಿ ವಯೋನಿವೃತ್ತರಾಗಿರುತ್ತಾರೆ, ಶ್ರೀಮತಿ ಸಿ.ಎಸ್. ಪೂರ್ಣಿಮ, ತಹಶೀಲ್ದಾರ್ ಗ್ರೇಡ್-1 ರವರು ಅದೇ ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಅರಣ್ಯ ಭೂಮಿಯನ್ನು ಪರಭಾರೆ ಮಾಡಲು ನಿರ್ಬಂಧವಿದ್ದಾಗ್ಯೂ ಅನಧಿಕೃತವಾಗಿ ಭೂ ಮಂಜೂರಾತಿ ಮಾಡಿರುವುದು ದೃಢಪಟ್ಟಿದೆ .

ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಭೂಮಿಯನ್ನು ಸಂರಕ್ಷಿಸುವುದರ ಬದಲು ಫಲಾನುಭವಿಗಳಿಂದ ಬಾಹ್ಯ ಪ್ರತಿಫಲಾಪೇಕ್ಷೆ ಪಡೆಯುವ ಉದ್ದೇಶದಿಂದ ಸರ್ಕಾರದ ಭೂಮಿಯನ್ನು ಅನಧಿಕೃತವಾಗಿ ಮಂಜೂರು ಮಾಡಿ ಕರ್ತವ್ಯ ಲೋಪ ಎಸಗಿರುವುದರ ಜೊತೆಗೆ ಪ್ರಕರಣದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ