4Mudigere1A (1)

 

 

ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ 22 ಸಂಪುಟವನ್ನು ಪ್ರತಿಯೊಬ್ಬರೂ ಓದಿ, ಅರ್ಥ ಮಾಡಿಕೊಳ್ಳಬೇಕು, ಕೋರೆಂಗಾವ್ ಹೋರಾಟ ಅಂದಿನ  ಎಲ್ಲಾ ಶೋಷಿತರ ವಿಜಯೋತ್ಸವದ ದಿನ ಎಂದು  ಕರ್ನಾಟಕ ಬೌದ್ಧ ಸಮಾಜದ ರಾಜ್ಯಾಧ್ಯಕ್ಷ ಡಾ.ಹ.ರಾ.ಮಹೇಶ್ ಹೇಳಿದರು.

ಅವರು ಶುಕ್ರವಾರ ಸಂಜೆ ಭೀಮ ಕೋರೆಂಗಾವ್ ವಿಜಯೋತ್ಸವ ಸಮಿತಿ ವತಿಯಿಂದ ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಏರ್ಪಡಿಸಿದ್ದ 207ನೇ ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋರೆಂಗಾವ್ ದಲಿತರ ವಿಜಯೋತ್ಸವವೆಂಬ ಕಪ್ಪು ಪಟ್ಟಿ ಹಚ್ಚಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಕೋರೆಂಗಾವ್ ಯುದ್ದ ಭೂಮಿ ಸ್ಥಾಪನೆ, ಸಾಮ್ರಾಜ್ಯ ವಿಸ್ತರಣೆ ಮಾಡಲು ಆದಂತ ಯುದ್ಧವಲ್ಲ. ಅವತ್ತಿಗೆ ಜಾತಿ ವ್ಯವಸ್ಥೆ ತುಂಬಿ ತುಳುಕುತ್ತಿತ್ತು. ದಲಿತರು ಸೇರಿದಂತೆ ಇತರೇ ಸಮುದಾಯಗಳು ನೆಮ್ಮದಿಯಾಗಿರಲಿಲ್ಲ. ಮನಸ್ಮೃತಿ ಕಾರಣಕ್ಕೆ ಒಂದು ಜಾತಿಗೆ ಹಾಗೂ ಕಸುಬಿಗೆ ಕಟ್ಟಿ ಹಾಕಲಾಗಿತ್ತು. ಆ ವ್ಯವಸ್ಥೆ ವಿರುದ್ಧ ನಡೆದಿದ್ದ ಯುದ್ಧವೇ ಭೀಮ ಕೋರೆಂಗಾವ್. ಆ ಯುದ್ಧದಲ್ಲಿ 22 ಸೈನಿಕರು ತಮ್ಮ ಪ್ರಾಣ ಅರ್ಪಿಸಿ ಗೆದ್ದಂತ ಯುದ್ದ. ಯುದ್ಧರಲ್ಲಿ ಎಸ್ಸೀ ಎಸ್ಟಿ ಸೇರಿದಂತೆ ಕೇವಲ 500 ಸೈನಿಕರ ಪೈಕಿ 36 ಮಂದಿ ಮುಸ್ಲಿಂ, 12 ಮಂದಿ ಕ್ರೈಸ್ತ ಸೈನಿಕರಿದ್ದರು. ಇವರೆಲ್ಲಾ ಸೇರಿ ಒಂದು ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದರು.

ಉಪನ್ಯಾಸಕ ಭಾಸ್ಕರ್ ವಿಟ್ಲಾ ಮಾತನಾಡಿ, ಈ ಸಮಾಜದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣ ನಾಶವಾದರೆ ಮಾತ್ರ ಸಮಾನತೆ ಸಿಗಲು ಸಾಧ್ಯವಾಗುತ್ತದೆಯೇ ಹೊರತು, ರಾಜಕೀಯ, ಹಣದಿಂದ ಸಾಧ್ಯವಿಲ್ಲ. ಜಾತಿ ಎಂಬ ಪೆಡಂಭೂತ ಜನರಲ್ಲಿ ಕಂದಕ ಸೃಷ್ಟಿ ಮಾಡುತ್ತಿದೆ. ಇದನ್ನು ಅರಿತ ಅಂಬೇಡ್ಕರ್ ಅವರು, ಎಲ್ಲಾ ಹೋರಾಟ ಜಾತಿ ವಿನಾಶಕ್ಕೆ ಮಾಡಿದ್ದಾರೆ. ಇದನ್ನು ಮೊದಲು ಎಲ್ಲರೂ ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಇನ್ನು ಮುಂದೆ ಯಾವುದೇ ಹೋರಾಟ ಮಾಡಿದರೂ ಅದು ಜಾತಿ ವಿನಾಶ ಹಾಗೂ ಸಮಾನತೆಗಾಗಿ ಇರಬೇಕು. ಆಗ ಮಾತ್ರ ಈ ಸಮಾಜ ಸುಧಾರಣೆಗೊಳ್ಳಲು ಸಾಧ್ಯ ಎಂದು ಹೇಳಿದರು.
ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸೆಯಲ್ಲಿ ಸಿದ್ದನಾಕ, ಸಾವಿತ್ರಿ ಬಾಯಿ ಪುಲೆ, ಬುದ್ಧ, ಅಂಬೇಡ್ಕರ್, ಸಂವಿಧಾನ ಪೀಠಿಕೆ, ವಿಜಯೋತ್ಸವ ಸ್ತಂಭದೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.

ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ತಹಸೀಲ್ದಾರ್ ರಾಜಶೇಖರ್ ಮೂರ್ತಿ ಮಾತನಾಡಿದರು.
ಸಮಿತಿ ಅಧ್ಯಕ್ಷ ಸಿದ್ದೇಶ್ ಕೆಸವೊಳಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಗಿರೀಶ್ ಹೆಸಗಲ್, ಉಪಾಧ್ಯಕ್ಷ ಸುರೇಂದ್ರ ಉಗ್ಗೇಹಳ್ಳಿ, ಬಿ.ಎಂ.ಮಂಜುನಾಥ್, ಜಾಕೀರ್ ಹುಸೇನ್, ಎಲ್.ಬಿ.ರಮೇಶ್, ಎಚ್.ಪಿ.ರಮೇಶ್, ಎಂ.ಎಸ್.ಅನಂತ್, ಮರಗುಂದ ಪ್ರಸನ್ನ, ಅಂಗಡಿ ಚಂದ್ರು, ಬಿ.ಬಿ.ಮಂಜುನಾಥ್, ಹಾಲಯ್ಯ, ಬಿ.ಎಂ.ಶಂಕರ್, ಯು.ಬಿ.ಮಂಜಯ್ಯ, ವಕೀಲ ಚಂದ್ರು, ಬಕ್ಕಿ ಮಂಜು, ಸೀತಮ್ಮ, ಸುಬ್ರಹ್ಮಣ್ಯ ಹಾಲೂರು, ರತನ್ ಊರುಬಗೆ, ಸಚಿನ್ ಬಾನಳ್ಳಿ ಮತ್ತಿತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಮೂಡಿಗೆರೆ ಪ್ರಮುಖ ಬೀದಿಗಳಲ್ಲಿ ಸ್ತಬ್ಧಚಿತ್ರ ಮತ್ತು ಕಲಾತಂಡಗಳೊಂದಿಗೆ ಆಕರ್ಷಕ ಮೆರವಣಿಗೆ ನಡೆಸಲಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ