ed ride 1

 

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿನಿಮೀಯ ರೀತಿಯ ದರೋಡೆಯೊಂದು ನಡೆದಿದ್ದು. ಇ.ಡಿ.(ಜಾರಿ ನಿರ್ದೇಶನಾಲಯ) ಅಧಿಕಾರಿಗಳ ಸೋಗಿನಲ್ಲಿ ಸುಲೇಮಾನ್​ ಎಂಬುವವರ ಮನೆಗೆ ಆಗಮಿಸಿದ ಖದೀಮರು 30 ಲಕ್ಷ  ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ ಬೋಳಂತೂರು ಸಮೀಪದ ಸಾರ್ಶ ಎಂಬಲ್ಲಿ ಘಟನೆ ನಡೆದಿದ. ಉದ್ಯಮಿ ಸುಲೇಮಾನ್​ ಹಾಜಿ ಎಂಬಾತ ಅನೇಕ ವರ್ಷಗಳಿಂದ ಸಿಂಗಾರಿ ಬೀಡಿ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ನಾಲ್ಕು ದಿನಗಳ ತಮ್ಮ ಹಿಡಿತದಲ್ಲಿದ್ದ ಕಟ್ಟಡವನ್ನು ಮಾರಾಟ ಮಾಡಿದ್ದರು. ಬೀಡಿ ಮಜೂರಿಗೆಂದು ಲಕ್ಷಾಂತರ ಹಣವನ್ನು ಮನೆಯಲ್ಲಿ ಇಟ್ಟಿದ್ದರು. ಈ ವಿಷಯವನ್ನು ತಿಳಿದಿದ್ದ ಖದೀಮರು ದರೋಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ್ದ ಖದೀಮರು. ಶುಕ್ರವಾರ ರಾತ್ರಿ 8 ಗಂಟೆ ಸಮಯದಲ್ಲಿ ಮನೆಗೆ ನುಗ್ಗಿದ್ದಾರೆ. ತಾವು ಇ.ಡಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು, ನಿಮ್ಮ ಮನೆಯನ್ನು ಶೋಧ ಮಾಡಲು ಆದೇಶವಿದೆ ಎಂದು ಹೇಳಿ, ಈ ವೇಳೆ ಮನೆಯಲ್ಲಿದ್ದವರ ಎಲ್ಲಾ ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣವನ್ನು ತೆಗೆದುಕೊಳ್ಳದೆ ಕೇವಲ ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ಹಣವನ್ನು ಪಡೆದುಕೊಂಡಿರುವುದಕ್ಕೆ ದಾಖಲೆಯನ್ನು ನೀಡಿದಂತೆ ನೀಡಿ. ಬೆಂಗಳೂರಿನ ಈಡಿ ಕಛೇರಿಗೆ ಬಂದು ವಿಚಾರಣೆ ಎದುರಿಸಿ ಎಂದು ಹೇಳಿ ಹೋಗಿದ್ದಾರೆ ಎನ್ನಲಾಗಿದೆ.   ಈ ವೇಳೆ ಸುಲೇಮಾನ್​ ಮತ್ತು ಅವರ ಮಗ ನಕಲಿ ಇಡಿ ಅಧಿಕಾರಿಗಳನ್ನು ಹಿಂಬಾಲಿಸಿದ್ದಾರೆ. ಆದರೆ ಕಣ್ಣು ಮರೆಸಿ ನಾಪತ್ತೆಯಾಗಿದ್ದಾರೆ.

ಸುಲೇಮಾನ್​ ದಕ್ಷಿಣ ಕನ್ನಡದ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದು. ಬೋಳಂತೂರಿನಲ್ಲಿ ದೊಡ್ಡ ವಿಸ್ತೀರ್ಣದ ಜಮೀನು ಮತ್ತು ಚಿಕ್ಕಮಗಳೂರಿನಲ್ಲಿ ಎಸ್ಟೆಟ್​ ಹೊಂದಿದ್ದಾರೆ.

ಎಫ್ಐಆರ್ ನಲ್ಲೇನಿದೆ?

ವಿಟ್ಲ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಪ್ರಕಾರ, “ಶುಕ್ರವಾರ ರಾತ್ರಿ 8:10 ರ ಸುಮಾರಿಗೆ ತಮಿಳುನಾಡಿನ ನೋಂದಣಿ ಹೊಂದಿರುವ ವಾಹನದಲ್ಲಿ ದೂರುದಾರರ ಮನೆಗೆ ಬಂದಿರುವ  6 ಮಂದಿಯ ವಂಚಕರ ತಂಡವು, ಮನೆಯವರ ಮೊಬೈಲ್‌ಗಳನ್ನು ತಮ್ಮ ವಶಕ್ಕೆ ಪಡೆದು, ಬಳಿಕ ಮನೆಯನ್ನೆಲ್ಲಾ ತಡಕಾಡಿದ್ದು, ಮನೆ ಪರಿಶೀಲನೆಗೆ ನಮಗೆ ಆದೇಶವಾಗಿದೆ ಎಂದು ದೂರುದಾರರ ಕುಟುಂಬವನ್ನು ನಂಬಿಸಿದ್ದಾರೆ. ಈ ವೇಳೆ, ಉದ್ಯಮಿಯ ಕೋಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು 25 ರಿಂದ 30 ಲಕ್ಷ ಹಣವನ್ನು ವಶಕ್ಕೆ ಪಡೆದ ವಂಚಕರು, ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ, ನಿಮ್ಮನ್ನು ಅರೆಸ್ಟ್ ಮಾಡಿ, ಕಸ್ಟಡಿಗೆ ತೆಗೆದುಕೊಳ್ಳುವುದಾಗಿಯೂ ಹೆದರಿಸಿದ್ದಾಗಿ ಎಫ್‌ಐಆರ್‌ ನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಉದ್ಯಮಿಯ ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು, ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ. ಪ್ರದೇಶದ ಸುತ್ತಮುತ್ತಲ ಸಿಸಿ ಕ್ಯಾಮರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದು ಯಾರೋ ಉದ್ಯಮಿಗೆ ಪರಿಚಿತರೇ ಮಾಡಿರುವ ಸಂಚಿರಬಹುದು ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ