ಚಿಕ್ಕಮಗಳೂರು ಜಿಲ್ಲೆಯ ನಾಗರೀಕರ ಕೋರಿಕೆಯಂತೆ ದಿನಾಂಕ 06.01.2025 ರಿಂದ ದಿನಾಂಕ 10.01.2025 ರವರೆಗೆ ಚಿಕ್ಕಮಗಳೂರು ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ರಾಮನಹಳ್ಳಿ ಕಛೇರಿಯಲ್ಲಿ ನಾಗರೀಕ ಬಂದೂಕು ತರಬೇತಿಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಜಿಲ್ಲೆಯ అತಿ ಅವಶ್ಯವಿರುವ ನಾಗರೀಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ನಾಗರೀಕ ಬಂದೂಕು ತರಬೇತಿಗೆ ಅರ್ಜಿ ಸಲ್ಲಿಸುವ ನಾಗರೀಕರು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು
. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಮಾವಣೆ ಮಾಡಿ ಲೈಸನ್ಸ್ ಇಲ್ಲದೆ ಠೇವಣಿಗೊಂಡ ಬಂದೂಕಿನ ಮಾಲೀಕರ ವಾರಸುದಾರರು.
* ತಂದೆಯಿಂದ ಮಕ್ಕಳಿಗೆ, ಗಂಡನಿಂದ ಹೆಂಡತಿಗೆ ಅಥವಾ ಕುಟುಂಬದ ಹಿರಿಯ ಸದಸ್ಯರಿಂದ ಕಿರಿಯ ಮಕ್ಕಳಿಗೆ ಲೈಸನ್ಸ್ ವರ್ಗಾವಣೆದಾರರಿಗೆ
* ಹೊಸ ಅರ್ಜಿದಾರರಿಗೆ ಕೊನೆಯ ಆದ್ಯತೆ ನೀಡಲಾಗುತ್ತದೆ.
* ಹೊರ ಜಿಲ್ಲೆಯ ನಾಗರೀಕರಿಗೆ ಅವಕಾಶವಿರುವುದಿಲ್ಲ.
ನಾಗರೀಕ ಬಂದೂಕು ತರಬೇತಿಗೆ ಆಯ್ಕೆಗೊಳ್ಳಲು ಒದಗಿಸಬೇಕಾದ ದಾಖಲಾತಿಗಳು
- ಆಧಾರ್ ಕಾರ್ಡ್
* ಪಾಸ್‌ಪೋರ್ಟ್ ಸೈಜ್‌ನ ಫೋಟೋ-02
* ಹಳೆಯ ಬಂದೂಕು ಲೈಸನ್ಸ್ (ಅಸಲಿ)
* ಕುಟುಂಬದ ವಂಶವೃಕ್ಷದ ಪ್ರತಿ
* ಪೊಲೀಸ್ ಇಲಾಖೆಯಲ್ಲಿ ಠೇವಣಿಗೊಂಡ ಬಂದೂಕನ್ನು ಠೇವಣಿ ಮಾಡಿಗೆ ಬಾಬ್ತು ಸರ್ಕಾರಕ್ಕೆ ಪಾವತಿಸಿದ ರಶೀದಿ.
ಈ ಮೇಲ್ಕಂಡ ದಾಖಲಾತಿಗಳನ್ನು ಪರಿಶೀಲಿಸಿ ತರಬೇತಿಯ ದಿನಾಂಕವನ್ನು ಅರ್ಹತೆಯುಳ್ಳ ನಾಗರೀಕರಿಗೆ ಮಾಹಿತಿಯನ್ನು ನೀಡಲಾಗುವುದು ಅರ್ಜಿಗಳ ಸಂಖ್ಯೆ ಹೆಚ್ಚಾದಲ್ಲಿ ಬೇರೆ ಬೇರೆ ತಂಡಗಳಾಗಿ ವಿಂಗಡಿಸಿ ತರಬೇತಿಯನ್ನು ನೀಡಲಾಗುವುದು.
. ತರಬೇತಿಗೆ ನಿಗದಿಪಡಿಸಿರುವ ಸರ್ಕಾರಿ ಶುಲ್ಕವನ್ನು ಭರಿಸಬೇಕಾಗಿರುತ್ತದೆ.




