ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ ಟಿಸಿ) ತನ್ನ ಟಿಕೆಟ್ ದರಗಳನ್ನು ಶೇಕಡಾ 15ರಷ್ಟು ಹೆಚ್ಚಿಸಿದೆ. ಜನವರಿ 4ರ ಮಧ್ಯರಾತ್ರಿಯಿಂದಲೇ ನೂತನ ಟಿಕೆಟ್ ದರ ಜಾರಿಗೆ ಬಂದಿದೆ.
ಕೆಎಸ್ ಆರ್ ಟಿಸಿಯು, ಬೆಂಗಳೂರಿನಿಂದ ಇತರ ಜಿಲ್ಲಾ ಕೇಂದ್ರಗಳಿಗೆ ಹೊರಡುವ ತನ್ನ ಬಸ್ಸುಗಳಿಗೆ ವಿಧಿಸಲಾಗುವ ಟಿಕೆಟ್ ದರದ ಪಟ್ಟಿ ಬಿಡುಗಡೆ ಮಾಡಿದೆ.
ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ಪರಿಷ್ಕೃತ ಬಸ್ ಟಿಕೆಟ್ ದರ ಈ ಕೆಳಕಂಡಂತಿದೆ.
(ಆವರಣದಲ್ಲಿ ಹಿಂದಿನ ದರವನ್ನು ನೀಡಲಾಗಿದೆ).
ಬೆಂಗಳೂರು – ತುಮಕೂರು (81) 91 ರೂ.
ಬೆಂಗಳೂರು – ಮಂಡ್ಯ (110) 131 ರೂ.
ಬೆಂಗಳೂರು – ಮಂಗಳೂರು (423) 453 ರೂ.
ಬೆಂಗಳೂರು – ಉಡುಪಿ (490) 516 ರೂ.
ಬೆಂಗಳೂರು – ಹಾಸನ (219) 246 ರೂ.
ಬೆಂಗಳೂರು – ಚಿಕ್ಕಬಳ್ಳಾಪುರ (69) 89 ರೂ.
ಬೆಂಗಳೂರು – ದಾವಣಗೆರೆ (322) 362 ರೂ.
ಬೆಂಗಳೂರು – ಮೈಸೂರು (161) 162 ರೂ.
ಬೆಂಗಳೂರು – ಚಿಕ್ಕಮಗಳೂರು (295) 323 ರೂ.
ಬೆಂಗಳೂರು – ಚಿತ್ರದುರ್ಗ (242) 274 ರೂ.
ಬೆಂಗಳೂರು – ರಾಮನಗರ (52) 52 ರೂ.
ಬೆಂಗಳೂರು – ಚಾಮರಾಜನಗರ (204) 206 ರೂ.
ಬೆಂಗಳೂರು – ಪುತ್ತೂರು (249) 457 ರೂ.
ಬೆಂಗಳೂರು – ಮಡಿಕೇರಿ (311) 313 ರೂ.
ಬೆಂಗಳೂರು – ಕೋಲಾರ (81) 85 ರೂ..
ಬೆಂಗಳೂರು – ಶಿವಮೊಗ್ಗ (332) 356 ರೂ.
ಬೆಂಗಳೂರು – ಕಲಬುರಗಿ (759) 805 ರೂ.
ಬೆಂಗಳೂರು – ಬೀದರ್ (890) 936 ರೂ.
ಬೆಂಗಳೂರು – ರಾಯಚೂರು (593) 638 ರೂ.
ಬೆಂಗಳೂರು – ಯಾದಗಿರಿ (709) 755 ರೂ.
ಬೆಂಗಳೂರು – ಬಳ್ಳಾರಿ (378) 455 ರೂ.
ಬೆಂಗಳೂರು – ಕೊಪ್ಪಳ (446) 506 ರೂ.
ಬೆಂಗಳೂರು – ವಿಜಯಪುರ (679) 779 ರೂ.
ಬೆಂಗಳೂರು – ಬೆಳಗಾವಿ (610) 697 ರೂ.
ಬೆಂಗಳೂರು – ಚಿಕ್ಕೋಡಿ (709) 801ರೂ.
ಬೆಂಗಳೂರು – ಬಾಗಲಕೋಟೆ (610) 685 ರೂ.
ಬೆಂಗಳೂರು – ಧಾರವಾಡ (520) 591 ರೂ.
ಬೆಂಗಳೂರು – ಹುಬ್ಬಳ್ಳಿ (490) 563 ರೂ.
ಬೆಂಗಳೂರು – ಕಾರವಾರ (648) 699 ರೂ.
ಬೆಂಗಳೂರು – ಶಿರಸಿ (498) 520 ರೂ.
ಬೆಂಗಳೂರು – ಗದಗ (520) 593 ರೂ.
ಬೆಂಗಳೂರು – ಹಾವೇರಿ (414) 474 ರೂ.



