ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಹೋಬಳಿ ಸತ್ತಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಆಯ್ಕೆಗೆ ಜನವರಿ 5ರಂದು ನಡೆದ ಚುನಾವಣೆಯಲ್ಲಿ ಈ ಕೆಳಕಂಡ ಸ್ಪರ್ಧಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದ 5 ಮತ್ತು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ 1 ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಉಳಿದ 5 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.
ಸಾಮಾನ್ಯ ಕ್ಷೇತ್ರದಿಂದ ಹಿರಿಯ ಸಹಕಾರಿ ಬಿ.ಸಿ. ಲೋಕಪ್ಪಗೌಡ, ಬಿ.ಪಿ. ಈರಪ್ಪಗೌಡ, ಎಸ್. ಜೆ. ಹರೀಶ್, ಇಸಾಕ್ ಕೆ, ಶ್ರೀನಿಧಿ ಕೆ.ಎಂ, ಹಾಗೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಯೋಗೇಶ್ ಎಸ್.ಜಿ. ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.

ಉಳಿದಂತೆ ಬಿಸಿಎಂ ಎ ಕ್ಷೇತ್ರದಿಂದ ಟಿ.ವಿ. ಗೆಲೇಶ್, ಬಿಸಿಎಂ ಬಿ ಕ್ಷೇತ್ರದಿಂದ ಲೋಕಪ್ಪಗೌಡ ಹೆಚ್.ಯು., ಮಹಿಳಾ ಮೀಸಲು ಕ್ಷೇತ್ರದಿಂದ ಕೆ.ಎಂ. ಕಮಲ ಪುಟ್ಟೇಗೌಡ, ಎಸ್.ಕೆ. ವನಿತಾ ಮಹೇಶ್, ಸಾಲೇತರ ಕ್ಷೇತ್ರದಿಂದ ಮಹೇಶ್ ಎ.ಪಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ ಖಾಲಿ ಉಳಿದಿದೆ.
ಮುಂದಿನ ಐದು ವರ್ಷಗಳಿಗೆ ನೂತನ ನಿರ್ದೇಶಕರು ಕಾರ್ಯನಿರ್ವಹಿಸಲಿದ್ದಾರೆ.



