ಮೂಡಿಗೆರೆ ಪ್ರಾಥಮಿಕ ಸಹಕಾರ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (PCARD) ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆ ದಿನಾಂಕ 08-01-2024 ರಂದು ನಡೆಯಿತು.
ಅಧ್ಯಕ್ಷರಾಗಿ ಹಳಸೆ ಶಿವಣ್ಣ ಹಾಗೂ ಉಪಾಧ್ಯಕ್ಷರಾಗಿ ಜಿ.ಕೆ. ದಿವಾಕರ್ ಗೌಡಹಳ್ಳಿ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಹಳಸೆ ಶಿವಣ್ಣ ರವರು 1996 ನೇ ಇಸವಿಯಿಂದ ಬ್ಯಾಂಕಿನ ಅಧ್ಯಕ್ಷರಾಗಿ ಸುಮಾರು 26 ವರ್ಷಕಾಲ ಸುಧೀರ್ಘ ಸೇವೆ ಸಲ್ಲಿಸುತ್ತಾ ಬಂದಿದ್ದು ತಾಲ್ಲೂಕಿನ ರೈತಾಪಿ ವರ್ಗದವರಿಗೆ ಅತ್ಯಂತ ಚಿರಪರಿಚಿತರಾಗಿರುತ್ತಾರೆ. ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಮಾಡಿ ರೈತರಿಗೆ ಸೇವೆ ಸಲ್ಲಿಸಲು ಸಾಧ್ಯವಾಗಿರುವುದಕ್ಕೆ ಹಳಸೆ ಶಿವಣ್ಣರವರ ಹರ್ಷವ್ಯಕ್ತಪಡಿಸಿರುತ್ತಾರೆ, ಇವರ ಸೇವಾ ಅವಧಿಯಲ್ಲಿ ಬ್ಯಾಂಕು ಸತತವಾಗಿ ನಿವ್ವಳ ಲಾಭದಲ್ಲಿ ಮುಂದುವರಿದು, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪಡೆಯಲು ಕಾರಣವಾಗಿರುತ್ತದೆ. ಹಾಗೂ ರೈತರಿಗೆ ಇವರ ಅವಧಿಯಲಿ ಪ್ರತಿ ವರ್ಷ ಶೇ.25 ರಷ್ಟು ಲಾಬಾಂಶ ನೀಡುತ್ತಾ ಬಂದಿರುವುದು ರೈತರ ಪ್ರಸಂಶೆಗೆ ಕಾರಣವಾಗಿರುತ್ತದೆ. ಹಳಸೆ ಶಿವಣ್ಣ ರವರು ಪ್ರಸ್ತುತ ಕರ್ನಾಟಕ ಗೋವರ್ಸ್ ಫೆಡರೇಷನ್ ನ ಅಧ್ಯಕ್ಷರು ಹಾಗೂ ಜಿಲ್ಲಾ ಸಕಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ. ಸಹಕಾರ ಕ್ಷೇತ್ರದಲ್ಲಿ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ರಾಜ್ಯಮಟ್ಟದ ಸಹಕಾರಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಬ್ಯಾಂಕಿನ ಉಪಾಧ್ಯಕ್ಷರಾಗಿ ಆಯ್ಕೆಯಾದ ದಿವಾಕರ ಜಿ.ಕೆ. ಇವರು ಎರಡನೇ ಅವಧಿಗೆ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ದಿವಾಕರ ಜಿ.ಕೆ ರವರು ಜಿಲ್ಲಾ ಸಹಕಾರ ಯೂನಿಯನ್ ನಲ್ಲಿ 5 ವರ್ಷ ಉಪಾಧ್ಯಕ್ಷರಾಗಿ ಹಾಗೂ ಗೌಡಹಳ್ಳಿ ಪ್ರಾಥಮಿಕ ಸಹಕಾರ ಸಂಘದಲ್ಲಿ ಸುಮಾರು 35ವರ್ಷ ಸತತವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ.

ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಎಲ್ಲಾ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಬ್ಯಾಂಕಿನ ನಿರ್ದೇಶಕರಾಗಿ ಹಳಸೆ ಶಿವಣ್ಣ, ಜಿ.ಕೆ. ದಿವಾಕರ್, ಓ.ಜಿ.ರವಿ, ಎಂ.ಎನ್. ಆಶ್ವಥ್, ಎಂ.ವಿ.ಜಗದೀಶ್, ಕೆ.ಅರ್.ದೀಪಕ್, ಕೆ.ಬಿ. ಗೋಪಾಲಗೌಡ, ಎಂ.ಕೆ. ಚಂದ್ರೇಶ್, ಹೆಚ್.ಕೆ. ಭರತ್ ಕುಮಾರ್, ಶ್ರೀಮತಿ ರಚನಾ ಅರುಣ್, ಶ್ರೀಮತಿ ಹೆಚ್.ಸಿ. ವಿನಂತಿ, ಆಣ್ಣಪ್ಪ



