IMG-20250114-WA0563

 

 

ಸಮಾಜ ಸೇವಕ ಬಣಕಲ್ ನ  ಸ್ನೇಕ್ ಆರಿಫ್ ಅವರಿಗೆ ಹಾವುಗಳನ್ನು ಸಂರಕ್ಷಣೆ ಮಾಡಲು ಸುರಕ್ಷತೆ ದೃಷ್ಟಿಯಿಂದ ಚೇತನ್ ಅತ್ತಿಗೆರೆ ರವರು ಶೂ ಹಾಗೂ ಕೈ ಕವಚಗಳನ್ನು ನೀಡಿದರು.
ಸಾವಿರಾರು ಉರಗಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಡುವ ಆರಿಫ್ ಅವರು ಮಲೆನಾಡಿನಲ್ಲಿ ಮನೆ ಹಾಗೂ ತೋಟಗಳಿಗೆ ಹಾವುಗಳು ಕಂಡರೆ ಆರಿಫ್ ಅವರಿಗೆ ಕರೆ ಮಾಡುತ್ತಾರೆ. ಕರೆ ಮಾಡಿದ ತಕ್ಷಣ ತಳಕ್ಕೆ ಬರುವ ಆರಿಫ್ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುತ್ತಾರೆ ಈ ಕಾಯಕಕ್ಕೆ ಆರೀಫ್ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುತ್ತಿರಲಿಲ್ಲ ಹಾಗಾಗಿ ಇದನ್ನು ಗಮನಿಸಿದ ಬೆಂಗಳೂರಿನಲ್ಲಿ ವೃತ್ತಿನಿರತರಾಗಿರುವ ಅತ್ತಿಗೆರೆ ಗ್ರಾಮದ ಚೇತನ್ ರವರು ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಶೂ ಹಾಗೂ ಕೈ ಕವಚಗಳನ್ನು  ಬೆಂಗಳೂರಿನಿಂದ ಕಳಿಸಿ ಕೊಟ್ಟದ್ದು, ಅವರು  ತನ್ನ ಸ್ನೇಹಿತರಾ  ಸಂಜಯ್ ಕೊಟ್ಟಿಗೆಹಾರ.  ಪ್ರದೀಪ್ ರಾಜ್ , ದೇವಪ್ಪ, ಸುಂದ್ರೇಶ್, ಉಮೇಶ್, ತನು ಕೊಟ್ಟಿಗೆಹಾರ, ಸುರೇಂದ್ರ ಕೊಣಗೆರೆ  ಇವರುಗಳು ಆರೀಫ್ ಅವರಿಗೆ ಪರಿಕರಗಳನ್ನು ಹಸ್ತಾಂತರಿಸಿದ್ದಾರೆ.
ಆರೀಫ್ ರವರು ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮದವರಾಗಿದ್ದು, ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಹಾವುಗಳನ್ನು ಹಿಡಿಯುವುದು, ತಮ್ಮ ಅಂಬುಲೆನ್ಸ್ ಮೂಲಕ ಅಪಘಾತ ಸಂಭವಿಸಿದಾಗ ತಕ್ಷಣ ಸ್ಪಂದಿಸುವುದು, ಅನಾಥ ಶವಗಳನ್ನು ಸಾಗಿಸಲು, ಅಂತ್ಯಸಂಸ್ಕಾರ ನೆರವೇರಿಸಲು, ವಿವಿಧ ಪ್ರಕರಣಗಳಲ್ಲಿ ಕೊಳೆತ ಶವಗಳನ್ನು ಎತ್ತಲು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವುದು ಸೇರಿದಂತೆ ಈ ಭಾಗದಲ್ಲಿ ಉತ್ತಮ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ