IMG-20250118-WA0376

 

 

ಮೂಡಿಗೆರೆ ತಾಲ್ಲೂಕಿನ ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾರಾಯಣ ಗೌಡ ಬಿ.ಎಸ್., ಉಪಾಧ್ಯಕ್ಷರಾಗಿ ರಂಗನಾಥ್ ಬಿ.ಆರ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಇವರಿಬ್ಬರನ್ನು ಹೊರತು ಪಡಿಸಿದರೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳಾದ ಜ್ಯೋತಿ ಲಕ್ಷ್ಮಿ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ  ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ  ನಾರಾಯಣ ಗೌಡರು ಮಾತನಾಡಿ ;  ಎಲ್ಲರಾ ಒಗ್ಗಟ್ಟಿನಿಂದ ರೈತರ ಸೇವೆ ಮಾಡಲು ಶ್ರಮಿಸುತ್ತೇನೆ.  ಸಹಕಾರ ಸಂಘದಲ್ಲಿ ಸರ್ವರನ್ನು ವಿಶ್ವಾಸಕ್ಕೆ ಪಡೆದು ಜನಪರ ಆಡಳಿತ ಕೊಡುವಲ್ಲಿ ಮುಂದಾಗುತ್ತೇನೆ.  ಎಲ್ಲಾ ಕೃಷಿಕ ಬಾಂಧವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸಂಘದಿಂದ ರೈತರಿಗೆ ದೊರೆಯುವ ಎಲ್ಲಾ ಸೌಲಭ್ಯಗಳ ಜೊತೆಯಲ್ಲಿ ಸಾಧ್ಯವಾಗುವ ಎಲ್ಲಾ ರೀತಿಯ ಸಹಕಾರವನ್ನು ಕೊಡಲು ಬದ್ಧನಾಗಿದ್ದೇನೆ ಎಂದರು.
 ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ. ಆರ್. ರಂಗನಾಥ್ ಮಾತನಾಡಿ ; ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇನೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ  ಜಯಗಳಿಸಿ ಆಡಳಿತ ಮಂಡಳಿ  ಉಪಾಧ್ಯಕ್ಷನಾಗಿ ಅಧಿಕಾರ ಪಡೆಯಲು ಎಲ್ಲಾ ಸದಸ್ಯರುಗಳಿಗೆ ತುಂಬು ಹೃದಯದ ಧನ್ಯವಾದಗಳನ್ನ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಭರತ್ ಬಿ.ಎಂ, ವಿಕ್ರಂ ಬಿ. ಎಸ್, ಗಜೇಂದ್ರ ಟಿ.ಎಂ, ಅಭಿಲಾಷ್ ಎ.ಆರ್., ಕಲ್ಲೇಶ್ ಬಿ. ಎಸ್, ಕೆ.ಕೆ. ಯತೀಶ್, ಮಮತಾ ಎಚ್. ಕೆ, ರವೀಂದ್ರ ಬಿ.ಎಂ, ಲಕ್ಷ್ಮಿ ಜಿ.ಬಿ, ಶರತ್ ಬಿ.ಬಿ, ಸಂಘದ  ಸಿ. ಇ. ಓ. ನಿಶಾಂತ್ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ