maduve 1

 

 

ಲಗ್ನಪತ್ರಿಕೆ ಕೊಡಲು ಹೋದ ತಂದೆ ಮಾರ್ಗ ಮಧ್ಯೆ ಅಪಘಾತದಿಂದ ಸಾವನ್ನಪ್ಪಿದ ವಿಷಯವನ್ನು ಗೌಪ್ಯವಾಗಿಟ್ಟು, ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.

ಭಾನುವಾರ ಹಾಗೂ ಸೋಮವಾರ ತರೀಕೆರೆ ಪಟ್ಟಣದ ನಾಗಪ್ಪ ಕಾಲೋನಿ ನಿವಾಸಿ ಚಂದ್ರು ಎಂಬವರ ಮಗಳ ಮದುವೆ ನಿಶ್ಚಯವಾಗಿತ್ತು. ಕೊನೆ ಮಗಳು ಎಂದು ಚಂದ್ರು ಅದ್ಧೂರಿಯಾಗಿ ಮದುವೆಗೆ ತಯಾರಿ ಮಾಡಿದ್ದರು. ಆದರೆ, ಮಗಳ ಮದುವೆ ಶಾಸ್ತ್ರದ ದಿನ ಆತ್ಮೀಯ ಸ್ನೇಹಿತರೊಬ್ಬರಿಗೆ ಲಗ್ನಪತ್ರಿಕೆ ಕೊಟ್ಟಿಲ್ಲ ಎಂದು ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಹೋಗಿ ಕಾರ್ಡ್ ಕೊಟ್ಟು ಬರುವ ವೇಳೆ ಮಾರ್ಗ ಮಧ್ಯೆ ಬೈಕ್ ಅಪಘಾತವಾಗಿತ್ತು.  ಗಂಭೀರ ಗಾಯವಾಗಿದ್ದ ಚಂದ್ರುರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಚಂದ್ರು ಭಾನುವಾರ ಮಧ್ಯಾಹ್ನನವೇ ಮರಣ ಹೊಂದಿದ್ದರು.

ವಿಷಯ ಮನೆಯವರಿಗೆ ತಿಳಿದರೆ ಮದುವೆ ನಿಲ್ಲುತ್ತೆ ಎಂದು ಕುಟುಂಬಸ್ಥರು ವಿಷಯವನ್ನ ಮೃತ ಚಂದ್ರು ಪತ್ನಿ ಹಾಗೂ ಮಗಳು ದೀಕ್ಷಾಗೆ ಹೇಳಲೇ ಇಲ್ಲ. ಅಪಘಾತವಾಗಿದೆ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿ ಭಾನುವಾರ ಸಂಜೆ ಆರತಕ್ಷತೆ ಮುಗಿಸಿ, ಸೋಮವಾರ ಬೆಳಗ್ಗೆ ಮುಹೂರ್ತವನ್ನೂ ಮುಗಿಸಿದ್ದಾರೆ. ಮುಹೂರ್ತ ಮುಗಿದ ಬಳಿಕ ವಿಷಯವನ್ನ ಮನೆಯವರಿಗೆ ತಿಳಿಸಲಾಗಿದೆ.

ವಿಷಯ ಕೇಳಿ ಮೃತನ ಪತ್ನಿ ಹಾಗೂ ಮಗಳಿಗೆ ಬರಸಿಡಿಲು ಬಡಿದಂತಾಗಿ ಕುಟುಂಬಸ್ಥರ ನೋವಿನ ಆಕ್ರಂದನ ಮುಗಿಲುಮುಟ್ಟಿದೆ. ಕಡೂರು ಪಟ್ಟಣದ ಬೀರೂರಿನ ತರಳಬಾಳು ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು, ಗಂಡು-ಹೆಣ್ಣು ಮನೆಗೆ ಬರುವ ವೇಳೆ ಮನೆಗೆ ತಂದೆಯ ಮೃತದೇಹ ಕೂಡ ಬಂದಿತ್ತು. ಮದುವೆಯ ಸಂಭ್ರಮದ ಖುಷಿಯಲ್ಲಿರಬೇಕಾದ  ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.

ಮೃತ ಚಂದ್ರುಗೆ ಮೂರು ಜನ ಹೆಣ್ಣುಮಕ್ಕಳು. ಮೊದಲ ಮಗಳ ಮದುವೆಯಲ್ಲಿ ಕೊರೊನಾ ಅಡ್ಡಿ ಬಂತು ಅಂತ ಕುಟುಂಬಸ್ಥರು, ಸಂಬಂಧಿಕರಷ್ಟೇ ಪಾಲ್ಗೊಂಡು ಸೂತಕದ ಛಾಯೇಯಲ್ಲಿಯೇ ಮದುವೆ ಮಾಡಿದ್ದರು. ಹಾಗಾಗಿ, ಕೊನೆ ಮಗಳ ಮದುವೆ ಅದ್ಧೂರಿಯಾಗಿ ಮಾಡಬೇಕು ಅಂತ ವ್ಯವಸ್ಥೆ ಮಾಡಿದ್ದರು. ಆದರೆ, ಮದುವೆಗೆ ಅಪ್ಪನೇ ಇರಲಿಲ್ಲ. ಮಗಳು ಹಾಗೂ ಪತ್ನಿ ಕೇಳಿದಾಗ, ಕುಟುಂಬಸ್ಥರು ಕೊನೆ ಮದುವೆ ಇಷ್ಟಪಟ್ಟು ಕಷ್ಟಪಟ್ಟು ಮದುವೆ ಮಾಡಿದ್ದಾನೆ. ಮದುವೆ ನಿಲ್ಲಬಾರದು ಅಂತ ಆಸ್ಪತ್ರೆಯಲ್ಲಿ ಇದ್ದಾನೆ. ಚೆನ್ನಾಗಿದ್ದಾನೆ ಎಂದು ಹೇಳಿ ಮದುವೆ ಮುಗಿದ ಮೇಲೆ ವಿಷಯವನ್ನ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ