ಮೂಡಿಗೆರೆ ತಾಲೂಕು ಬೆಳೆಗಾರರ ಸಂಘ ಮತ್ತು ಮೂಡಿಗೆರೆ ನಗರ ಟೈಲರ್ ಸಮಿತಿಯ ಸಂಯುಕ್ತಾಶ್ರಯದಲ್ಲಿ 76 ನೇ ಗಣರಾಜ್ಯೋತ್ಸವವನ್ನು ಮೂಡಿಗೆರೆ ಪಟ್ಟಣದ ಬೆಳೆಗಾರರ ಸಂಘದ ಭವನದ ಆವರಣದಲ್ಲಿ ಆಚರಿಸಲಾಯಿತು.
ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ.ಆರ್. ಬಾಲಕೃಷ್ಣ ಧ್ವಜಾರೋಹಣ ನೆರವೇರಿಸಿ ಸಂವಿಧಾನ ಪಾಲನೆಯಿಂದ ಭಾರತದಲ್ಲಿನ ಒಕ್ಕೂಟ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದ್ದ, ನಮ್ಮ ದೇಶ ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ ಮತ್ತು ವಿಶ್ವದಲ್ಲಿಯೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ನಮ್ಮ ದೇಶದ ಕಾನೂನುಗಳಿಗೆ ನಾವೆಲ್ಲಾ ಗೌರವವನ್ನು ನೀಡಿ ಜೀವನ ನಡೆಸಿದರೆ ದೇಶ ಸಮೃದ್ಧಿಯಾಗುತ್ತದೆ ಎಂದರು.
ಟೈಲರ್ ನಗರಾಧ್ಯಕ್ಷರಾದ ಉಮಾ ಶಂಕರ್, ಕ್ಷೇತ್ರ ಅಧ್ಯಕ್ಷರಾದ ಶಿವೆಗೌಡ ದೀಪ ಬೆಳಗಿಸಿ ಸ್ವಾಸ್ಥ್ಯ ಸಮಾಜ, ಸಹಬಾಳ್ವೆ, ಸಮಾನತೆಯನ್ನು ಸಾಧಿಸಲು ಸಂವಿಧಾನ ಆಶಯದಂತೆ ಮುನ್ನಡೆಯೋಣ ಎಂದರು,
ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಮನೋಹರ್, ರೇವಣ್ಣಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಿ.ಕೆ. ಲಕ್ಷ್ಮಣಗೌಡ, ಟೈಲರ್ ಸಂಘದ ಗಿರೀಶ್, ಮನೊಹರ, ಸತಿಶ್, ಪ್ರಕಾಶ್, ಮಂಜುಳಾ, ಪೂರ್ಣೆಶ್, ರಘು, ಲಕ್ಷ್ಮಣಗೌಡ, ಮಂಜು,ಗೊವಿಂದ್, ನರಸಿಂಹ ಟೈಲರ್ ಉಪಸ್ಥಿತರಿದ್ದರು.



