ಶಿಕ್ಷಣ ಕ್ಷೇತ್ರದಲ್ಲಿ ಸಿಗುವ ಸಂತೋಷ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಮೂಡಿಗೆರೆ ಯೂರೋಕಿಡ್ಸ್ ವುಡ್ ಬ್ರಿಡ್ಜ್ ಶಾಲೆಯ ವ್ಯವಸ್ಥಾಪಕ ದೀಪಕ್ ಚಿಪ್ರಗುತ್ತಿ ಹೇಳಿದರು.
ಅವರು ಶುಕ್ರವಾರ ಶಾಲೆಯ ಆವರಣದಲ್ಲಿ ನಡೆದ 10 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ನಾನು. ಲಹರಿ. ಸುಮಂತ್. ರಶ್ಮಿ ನಾಲ್ವರು ಸೇರಿ 10 ವರ್ಷದ ಹಿಂದೆ ಈ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದೇವು. ಏನಾದರೂ ಸಾಧನೆ ಮಾಡಬೇಕಾದರೆ ಅದು ನಾವು ಹುಟ್ಟಿ ಬೆಳೆದಿರುವ ಊರಿನಲ್ಲೇ ಆದರೆ ಇನ್ನು ಖುಷಿ ಹಾಗಾಗಿ ನಾವು ಬೆಳೆದಿರುವ ಊರಿನಲ್ಲೇ ಶಾಲೆ ಪ್ರಾರಂಭಿಸಿ ಎಲ್ಲರ ಸಹಕಾರದಿಂದ ದಶಮಾನೋತ್ಸವ ಕ್ಕೆ ಕಾಲಿಟ್ಟಿದ್ದೇವೆ. ಮುಂದೆಯೂ ಪೋಷಕರ ಸಹಕಾರ ನಮ್ಮ ಶಾಲೆಯ ಮೇಲೆ ಇರಲಿ ಎಂದು ಹೇಳಿದರು.
ಯೂರೋಕಿಡ್ಸ್ ಶಾಲೆಯಲ್ಲಿ ಉನ್ನತ ಮಟ್ಟದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸಾಧನೆ ಮಾಡಲು ಪೂರಕವಾದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ದೊರಕಬೇಕು ಎಂಬುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಕಳೆದ ಹತ್ತು ವರ್ಷಗಳಿಂದ ಪ್ರೋತ್ಸಾಹ ನೀಡಿರುವ ಸರ್ವರನ್ನು ಈ ಸಂದರ್ಭದಲ್ಲಿ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ದೀಪಕ್ ಪೋಷಕರಾದ ದಯಾಸಾಗರ್ ದಂಪತಿಗಳನ್ನು ರಶ್ಮಿ ಪೋಷಕರಾದ ಪುಟ್ಟಸ್ವಾಮಿ ದಂಪತಿಗಳಿಗಳನ್ನು ಹಾಗೂ ಲಹರಿ ತಾಯಿ ಶ್ರೀಮತಿ ಲತಾ ಶಂಕರೇಗೌಡ ಹಾಗೂ ಶಾಲಾ ಶಿಕ್ಷಕರನ್ನು ಗೌರವಿಸಲಾಯಿತು.

ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.



