raitha dinacharane photo 1

 

 

ಕಾಫಿ ಉತ್ಪಾದನೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಬಹುಮುಖ್ಯ ಎಂದು ನೆಸ್ಲೆ ಇಂಡಿಯಾ ಕಾರ್ಯನಿರ್ವಹಕ ಶಿವಕುಮಾರ್ ಹೇಳಿದರು.

ಅವರು ಮೂಡಿಗೆರೆ ತಾಲ್ಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ಜೇಸಿಐ ಮೂಡಿಗೆರೆ ವತಿಯಿಂದ ಆಯೋಜಿಸಿದ್ದ ರೈತದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಾಫಿ ಬೆಳೆಯಲ್ಲಿ ಮಣ್ಣಿನ ಫಲವತ್ತತೆ, ನೆರಳಿನ ನಿರ್ವಹಣೆ, ಪೋಷಕಾಂಶ ಮತ್ತು ನೀರಿನ ನಿರ್ವಹಣೆ ಬಹುಮುಖ್ಯವಾಗಿದೆ. ಮುಖ್ಯ ಪೋಷಕಾಂಶಗಳ ಜೊತೆ ಸೂಕ್ಷ್ಮ ಪೋಷಕಾಂಶಗಳನ್ನು ನೀಡುವುದು ಬೆಳೆಯ ಸಮಗ್ರ ಬೆಳವಣಿಗೆಗೆ ಬಹಳ ಪ್ರಮುಖವಾಗಿದೆ. ಕಾಫಿ ಕೊಯ್ಲೋತ್ತರ ಸಂಸ್ಕರಣೆಯೂ ಅಷ್ಟೇ ಮುಖ್ಯವಾಗಿದೆ. ಇಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದ್ದುದರಿಂದ ಉತ್ತಮ ಬೇಡಿಕೆ ಮತ್ತು ಬೆಲೆ ಸಿಗಬೇಕು ಎಂದರೆ ಕಾಫಿಯನ್ನು ಉತ್ತಮ ರೀತಿಯಲ್ಲಿ ಸಂಸ್ಕರಣೆ ಮಾಡುವುದು ಮುಖ್ಯ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೋಪಾಲಗೌಡ ಮಾತನಾಡಿ ; ಕಾಫಿಗೆ ಈಗ ಉತ್ತಮ ಬೆಲೆ ಬಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಸಂದರ್ಭದಲ್ಲಿ ರೈತರು ತಮ್ಮ ತೋಟಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಮೂಡಿಗೆರೆ ಜೇಸಿಐ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎನ್.ರವಿ, ಗ್ರಾ.ಪಂ. ಸದಸ್ಯ ಶಿವಾನಂದ, ಮೂಡಿಗೆರೆ ಜೇಸಿಐ ಪೂರ್ವಾಧ್ಯಕ್ಷ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ರೈತ ದಂಪತಿಗಳಾದ ಕೆ.ಎಂ. ಮಂಜುನಾಥಗೌಡ ಪಾರ್ವತಮ್ಮ, ಗೋಪಾಲಗೌಡ ವರಮಹಾಲಕ್ಷ್ಮೀ, ಕೃಷ್ಣೇಗೌಡ, ಚಂದ್ರೇಗೌಡ ಸರೋಜ, ಲೀಲಾವತಿ, ಶೇಷೇಗೌಡ ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಜೇಸಿ ಮಾಜಿ ಅಧ್ಯಕ್ಷ ಕೃತಿ ಪ್ರದೀಪ್, ಸುಧಾ ಚಂದ್ರಶೇಖರ್, ಲೇಡಿ ಜೇಸಿ ಅಧ್ಯಕ್ಷೆ ರೇಖಾ ನಾಗರಾಜ್, ಕಾರ್ಯದರ್ಶಿ ಮೇಘ ವಿಕಾಸ್, ಜೇಸಿಐ ಖಜಾಂಚಿ ಸುದೀಪ್ ತ್ರಿಪುರ, ಸದಸ್ಯರಾದ ಪ್ರೇಮ ಪುಣ್ಯಮೂರ್ತಿ, ಸಂದ್ಯಾ ಸುದೀಪ್, ವಿಶ್ವ ಮುಗ್ರಹಳ್ಳಿ, ಆಕಾಶ್ ಹಾಗೂ ಕುನ್ನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ